ಭಾರತೀಯ ಸೇನೆ ಸೇರುವುದು ಅಪೂರ್ವ ಅವಕಾಶ

shimogga dasara
Published on

ಶಿವಮೊಗ್ಗ: ಭಾರತೀಯ ಸೇನೆ ಸೇರುವುದು ಅಪೂರ್ವ ಅವಕಾಶ. ಮಕ್ಕಳು ಸೇನೆ ಸೇರುವ ಬಯಕೆಯನ್ನು ಹೊಂದಿದ್ದರೆ ತಾಯಂದಿರು, ಪಾಲಕರು ಯಾವುದೇ ಕಾರಣಕ್ಕೆ ತಡೆಯಬೇಡಿ ಎಂದು ನಿವೃತ್ತ ಲೆಫ್ಟಿನೆಂಟ್ ಜನರಲ್ ಬಿ.ಎಸ್.ರಾಜು ಸಲಹೆ ನೀಡಿದರು.

ನಗರದ ಕೋಟೆ ರಸ್ತೆಯ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸೋಮವಾರ ಶಿವಮೊಗ್ಗ ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಾಡಹಬ್ಬ ಶಿವಮೊಗ್ಗ ದಸರಾ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, 22 ತಿಂಗಳ ಹಿಂದಷ್ಟೇ ಸೇನೆಯಿಂದ ನಿವೃತ್ತಿಯಾಗಿದ್ದೇನೆ. 50 ವರ್ಷ ಸೇನಾ ಸಮವಸ್ತ್ರ ಧರಿಸಿದ್ದೇನೆ. ಸೇನೆಯಲ್ಲಿರುವಷ್ಟೂ ದಿನವೂ ಪತ್ನಿ ಬೆಂಬಲ ನೀಡಿದ್ದಾಳೆ. ಒಬ್ಬ ವ್ಯಕ್ತಿಯ ಏಳಿಗೆ ಹಿಂದೆ ಪತ್ನಿ ಬೆಂಬಲ ಅತ್ಯಗತ್ಯವಾಗಿದೆ ಎಂದರು.

ಲೇಹ್ ಲಡಾಕ್‌ನಲ್ಲಿ ಮೊದಲ ಸೇವೆ ಸಲ್ಲಿಸಿದ ನಾನು ಆನಂತರ ಸಿಯಾಚಿನ್‌ನಲ್ಲಿ ಕೆಲಸ ಮಾಡಿದ್ದೇನೆ. ನಾಲ್ಕು ತಿಂಗಳು ಅಲ್ಲಿ ಕೆಲಸ ಮಾಡಿದ್ದು, ಮೈನಸ್ ಡಿಗ್ರಿ ಉಷ್ಣತೆ ಇರುತ್ತದೆ. ಅವಕಾಶ ಸಿಕ್ಕಾಗ ಎಲ್ಲರೂ ಲೇಹ್ ಲಡಾಕ್‌ಗೆ ಹೋಗಿ ಬನ್ನಿ. ಕಾಶ್ಮೀರದಲ್ಲಿ ಮಾಡಿದ ಕೆಲಸವೂ ನನಗೆ ತೃಪ್ತಿದಾಯಕವಾಗಿತ್ತು ಎಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net