ಬಾಲಕಾಶ್ರಮ ವರ್ಷಾಚರಣೆಯ ಪೂರ್ವಭಾವಿ ಸಭೆ

gan (3)
Published on

ಕುಂದಾಪುರ: ಬಸ್ರೂರು ಶ್ರೀ ಭುವನೇಂದ್ರ ಬಾಲಕಾಶ್ರಮದ 60ನೇ ವರ್ಷದ ಸಂಭ್ರವಾಚರಣೆಯ ಪೂರ್ವಭಾವಿ ಸಭೆ ಕೋಟೇಶ್ವರದ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ಮಂಗಳವಾರ ನಡೆಯಿತು.

ಬಸ್ರೂರು ಶ್ರೀ ಭುವನೇಂದ್ರ ಬಾಲಕಾಶ್ರಮದ ಸಂಚಾಲಕ ಶ್ರೀಧರ ಕಾಮತ್ ಮಾತನಾಡಿ, 1965ರಲ್ಲಿ ಶ್ರೀ ಕಾಶೀ ಮಠದ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿ ಅವರಿಂದ ಆರಂಭಗೊಂಡ ಬಾಲಕಾಶ್ರಮದಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಜನೆ ಪಡೆದು ಇಂದು ದೇಶ- ವಿದೇಶಗಳಲ್ಲಿ ಉದ್ಯೋಗ, ವ್ಯವಹಾರದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ವರ್ಷಾಚರಣೆ ಸಂಭ್ರಮದಲ್ಲಿ ಆಶ್ರಮದ ಹಳೇ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಸಿಎ ಜಗನ್ನಾಥ ಕಾಮತ್, ದಿನೇಶ ಜಿ.ಕಾಮತ್, ಬಸ್ರೂರು ಶ್ರೀ ಭುವನೇಂದ್ರ ಬಾಲಕಾಶ್ರಮದ ಪರಿವೀಕ್ಷಕ ರಾಮಚಂದ್ರ ಪಡಿಯಾರ್, ಗೋಪಾಲಕೃಷ್ಣ ಕಾಮತ್, ರಂಗನಾಥ ಪಡಿಯಾರ್, ಗೋಪಿನಾಥ ಕಾಮತ್, ಗಣೇಶ ಕಾಮತ್ ಮತ್ತಿರರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net