

ಕೋಟ: ನಮ್ಮ ಸಂಸ್ಕೃತಿಯನ್ನು ಆರಾಧಿಸಿ, ಆಚರಿಸಿ, ಸಂಭ್ರಮಿಸುವ ಸಾಮಾಜಿಕ ಭಾವನೆ ಮೂಲಕ ಸಂಬಂಧದೊಂದಿಗೆ ಅನ್ಯೋನ್ಯವಾದ ಬಾಂಧವ್ಯ ಬೆಸೆಯುವ ಕಾರ್ಯಕ್ರಮ ವರಮಹಾಲಕ್ಷ್ಮೀ ಪೂಜೆ, ರಕ್ಷಾಬಂಧನ ಎಂದು ಶಾಲಾ ಮಕ್ಕಳ ಮಾತೆಯರ ಮಾತೃ ಭಾರತೀಯ ನಿಕಟ ಪೂರ್ವ ಅಧ್ಯಕ್ಷ ಭಾಗ್ಯೇಶ್ವರಿ ಮಯ್ಯ ಹೇಳಿದರು.
ವಿದ್ಯಾಗಿರಿ ತೆಕಟ್ಟೆ ಸೇವಾ ಸಂಗಮ ವಿದ್ಯಾ ಕೇಂದ್ರದಲ್ಲಿ ಶಾಲಾ ಮಾತೃ ಭಾರತೀಯ ಮಾತೆಯರಿಂದ ವರಮಹಾಲಕ್ಷ್ಮೀ, ರಕ್ಷಾಬಂಧನ ಕಾರ್ಯಕ್ರಮ ಆಚರಿಸಲಾಯಿತು.
ಮಾತೃ ಭಾರತೀಯ ಅಧ್ಯಕ್ಷ ಶ್ರುತಿ ಉಡುಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶಿಲ್ಪಾ ವಸಂತ್ ರಕ್ಷಾ ಬಂಧನ ಮಹತ್ವ ತಿಳಿಸಿದರು. ಸೇವಾ ಸಂಗಮ ವಿದ್ಯಾಕೇಂದ್ರದ ಎಲ್ಲ ಮಾತೆಯರಿಗೆ ಬಾಗಿನ ನೀಡಿ ರಕ್ಷೆ ಕಟ್ಟಲಾಯಿತು. ಸವಿತಾ ಸ್ವಾಗತಿಸಿದರು. ಆಶಾ ವಂದಿಸಿದರು. ಗೀತಾ ಕಾರ್ಯಕ್ರಮ ನಿರೂಪಿಸಿದರು.