ಮಿತ್ತಮಜಲು ಕ್ಷೇತ್ರದಲ್ಲಿ ಪೂರ್ವಭಾವಿ ಸಭೆ

New Project (4)
Published on

ಬಂಟ್ವಾಳ: ಸಜೀಪ ಮಾಗಣೆ ಮಿತ್ತಮಜಲು ಶ್ರೀ ನಡಿಯೇಳು ದೈವಂಗಳು ಶ್ರೀ ಉಳ್ಳಾಲ್ತಿ, ಶ್ರೀ ನಾಲ್ಕೈತ್ತಾಯ ಹಾಗೂ ಪರಿವಾರ ದೈವಗಳ ಕ್ಷೇತ್ರ ಪುನಃನಿರ್ಮಾಣಗೊಂಡು 3 ಗೋಪುರಗಳ ಲೋಕಾರ್ಪಣೆ ಏಪ್ರಿಲ್ 2 ಹಾಗೂ 3ರಂದು ನೀಲೇಶ್ವರ ಕೆ.ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ನೇತೃತ್ವದಲ್ಲಿ ಜರುಗಲಿದ್ದು ಇದರ ಪೂರ್ವಭಾವಿ ಸಿದ್ಧತಾ ಸಭೆ ಭಾನುವಾರ ಶ್ರೀಕ್ಷೇತ್ರದಲ್ಲಿ ಜರುಗಿತು.

ಸಜೀಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮದ ಮಾಹಿತಿ ನೀಡಿದರು. ಗೌರವಾಧ್ಯಕ್ಷ ವಿವೇಕ್‌ಶೆಟ್ಟಿ ನಗ್ರಿಗುತ್ತು ಮಾತನಾಡಿದರು. ವೇದಿಕೆಯಲ್ಲಿ ಜಯಶಂಕರ ಬಾಸ್ರಿತ್ತಾಯ, ಸತೀಶ್ ಪೆರ್ಗಡೆ ಕಾಂತಾಡಿಗುತ್ತು, ಎಸ್.ಶ್ರೀಕಾಂತ್ ಶೆಟ್ಟಿ, ದೇವಿ ಪ್ರಸಾದ್ ಪೂಂಜ, ರತ್ನಾಕರ ನಾಡರು ಉಪಸ್ಥಿತರಿದ್ದರು. ಜತೆ ಕೋಶಾಧಿಕಾರಿ ಶಿವಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net