

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನಮ್ ನಿತ್ಯಾನಂದ ನಗರದ ಶ್ರೀರಾಮ ಭಗವಾನ್ ನಿತ್ಯಾನಂದ ದೇವಸ್ಥಾನದಲ್ಲಿ ಮಾ.30ರಿಂದ ಎ. 6ರ ವರೆಗೆ ನಡೆಯುವ 65ನೇ ವರ್ಷದ ಶ್ರೀ ರಾಮತಾರಕ ಮಂತ್ರ ಸಪ್ತಾಹ, ಪ್ರತಿಷ್ಠಾ ಜಾತ್ರೋತ್ಸವ ಹಾಗೂ ಮಹಾಬ್ರಹ್ಮರಥೋತ್ಸವದ ಅಂಗವಾಗಿ ಭಕ್ತರ ಸಮಾಲೋಚನಾ ಸಭೆ ಶ್ರೀರಾಮ ಕ್ಷೇತ್ರದಲ್ಲಿ ನಡೆಯಿತು.
ಕ್ಷೇತ್ರದ ಪೀಠಾಧೀಶ ಮಹಾಮಂಡಲೇಶ್ವರ 1008 ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿಯವರು ಆಶೀರ್ವಚನ ನೀಡಿ, ಕಳೆದ 65 ವರ್ಷದಿಂದ ಶ್ರೀರಾಮ ತಾರಕ ಮಂತ್ರ ಸಪ್ತಾಹ ಮತ್ತು ಪ್ರತಿಷ್ಠಾ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಈ ವರ್ಷ ಮಾ.30ರಂದು ಭಜನಾ ಸಪ್ತಾಹ ಮತ್ತು ಜಾತ್ರೋತ್ಸವ ಉದ್ಘಾಟನೆಗೊಂಡು ಎ.6ರವರೆಗೆ ವಿವಿಧ ವೈದಿಕ ಕಾರ್ಯಕ್ರಮ, ಬ್ರಹ್ಮರಥೋತ್ಸವದೊಂದಿಗೆ 5 ದಿನ ರಥೋತ್ಸವ ನಡೆಯಲಿದ್ದು ಜಾತ್ರೆಯ ಯಶಸ್ವಿಗೆ ಎಲ್ಲರೂ ಸಹಕಾರ ನೀಡಬೇಕು. ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ಶಾಖಾಮಠಕ್ಕೆ ಮೇ 19ರಂದು ಶಿಲಾನ್ಯಾಸ ನಡೆಯಲಿದೆ ಎಂದರು.
ಶಾಸಕ ಹರೀಶ್ ಪೂಂಜ ಮಾತನಾಡಿ ಸ್ವಾಮೀಜಿಗಳಿಗೆ ಮಹಾಮಂಡಲೇಶ್ವರ ಪದವಿ ಸಿಕ್ಕಿದ್ದು ದಕ್ಷಿಣ ಭಾರತಕ್ಕೆ ಹೆಮ್ಮೆಯ ವಿಚಾರವಾಗಿದೆ.ಇದರ ಅಂಗವಾಗಿ ಸ್ವಾಮೀಜಿಯವರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಜಾತ್ರೋತ್ಸವದಲ್ಲಿ ಎಲ್ಲ ಭಾಗಗಳ ಜನರು ಕ್ಷೇತ್ರಕ್ಕೆ ಬೇಕಾದ ಹೊರೆಕಾಣಿಕೆ ಸಮರ್ಪಣೆ ಮಾಡಬೇಕು ಎಂದರು.
ಶ್ರೀಕ್ಷೇತ್ರ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಗೌರವಾಧ್ಯಕ್ಷ ಪೀತಾಂಬಾರ ಹೇರಾಜೆ, ಶ್ರೀರಾಮ ಕ್ಷೇತ್ರ ಸೇವಾ ಸಮಿತಿಯ ಸಂಚಾಲಕ ಜಯಂತ ಕೋಟ್ಯಾನ್, ಧರ್ಮಸ್ಥಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ರೀನಿವಾಸ ರಾವ್, ಅಭಿನಂದನ್ ಹರೀಶ್ ಕುಮಾರ್, ಜಿ.ಪಂ. ಮಾಜಿ ಸದಸ್ಯೆ ನಮಿತಾ ತೋಟತ್ತಾಡಿ, ಪ್ರಶಾಂತ್ ಪಾರೆಂಕಿ, ರತ್ನಾಕರ ಬುಣ್ಣಾನ್, ಗಣೇಶ್ ಗೌಡ ನಾವೂರು, ವಕೀಲ ಅನಿಲ್ ಕುಮಾರ್ ಯು., ಗುರುರಾಜ ಗುರಿಪಳ್ಳ, ಪ್ರಶಾಂತ್ ಕೊಕ್ರಾಡಿ, ರಮಾನಂದ ಸಾಲಿಯಾನ್ ಮುಂಡೂರು, ಹರೀಶ್ ಸುವರ್ಣ ಕನ್ಯಾಡಿ, ಅಣ್ಣಿ ಪೂಜಾರಿ ಕಾಶಿಬೆಟ್ಟು, ಶಿವಕಾಂತ ಗೌಡ, ತಿಮ್ಮಪ್ಪ ಗೌಡ ಬೆಳಾಲು, ಎ. ಎನ್. ನಾಯ್ಕ ಸಿದ್ದಾಪುರ, ಸೀತಾರಾಮ ಬಿ. ಎಸ್, ಸುಜಾತಾ ಅಣ್ಣಿ ಪೂಜಾರಿ, ಪೂರ್ಣಿಮಾ ಮುಂಡಾಜೆ, ಜಯಶಂಕರ್ ಎಂ.ಬಿ. ಉಜಿರೆ, ಗಂಗಾಧರ್ ಸಾಲಿಯಾನ್ ಬೆಳಾಲು, ಲಕ್ಷ್ಮೀಧರ ಪಡಿವಾಳ್ ಉಜಿರೆ, ಡಿ. ಕೃಷ್ಣ ಕನ್ಯಾಡಿ, ಸುದರ್ಶನ್ ಕನ್ಯಾಡಿ, ಶ್ರೀ ರಾಮ ಕ್ಷೇತ್ರ ಸೇವಾ ಸಮಿತಿ ಧರ್ಮಸ್ಥಳ ಗ್ರಾಮ ಸಮಿತಿ ಅಧ್ಯಕ್ಷ ಪುರುಷೋತ್ತಮ ಧರ್ಮಸ್ಥಳ, ಕಲ್ಮಂಜ ಗ್ರಾಮ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ, ಬೆಳಾಲು ಗ್ರಾಮ ಸಮಿತಿ ಅಧ್ಯಕ್ಷ ಜಾರಪ್ಪ ಪೂಜಾರಿ ಬೆಳಾಲು, ಲಿಂಗಪ್ಪ ಸಾಲಿಯಾನ್ ಪುದುವೆಟ್ಟು, ಪಿ.ಡಿ. ಸೋಮನಾಥ್ ಧರ್ಮಸ್ಥಳ ಸಚ್ಚಿದಾನಂದ, ನೀಲಾಧರ ಶೆಟ್ಟಿ, ಪ್ರಭಾಕರ ಪೂಜಾರಿ ಡಿ., ಕೃಷ್ಣ ಮೂರ್ತಿ ರಾವ್, ಸಚಿನ್ ಕನ್ಯಾಡಿ, ರಾಘವ ಕಲ್ಮಂಜ, ಸುನೀಲ್ ಕನ್ಯಾಡಿ, ರವೀಂದ್ರ ಪೂಜಾರಿ ಆರ್ಲ, ಶ್ರೀ ರಾಮ ಕ್ಷೇತ್ರ ಸೇವಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಭಕ್ತರು, ಊರವರು, ರಥಬೀದಿ ವ್ಯಾಪಾರಸ್ಥರು ಉಪಸ್ಥಿತರಿದ್ದರು. ಕ್ಷೇತ್ರದ ಟ್ರಸ್ಟಿ ತುಕಾರಾಮ ಸಾಲಿಯಾನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
.