

ಕೊಡಗು: ಮಾಧ್ಯಮದವರ ಕಣ್ಣು ಮಾತ್ರ ಸಿನಿಮಾದವರ ಮೇಲಿದೆ. ಆದರೆ, ನಾವು ಎಲ್ಲರ ಮೇಲೆ ಕಣ್ಣಿಟ್ಟಿದ್ದೇವೆಂದು ಡಿಜಿಪಿ ಪ್ರವೀಣ್ ಸೂದ್ ಹೇಳಿದರು.
ಪೊಲೀಸರು ಮಾಮೂಲಿ ತೆಗೆದುಕೊಂಡು ದಂಧೆಗೆ ಸಹಕರಿಸುತ್ತಾರೆಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಆರೋಪ ಮಾಡುವ ಹಕ್ಕಿದೆ. ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ. ಯಾರ ಮೇಲೆ ಆರೋಪ ಮಾಡಿದ್ದಾರೋ ಅದೇ ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದರು.
ಪೊಲೀಸರು ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್‌ಗೆ ಒಳಗಾಗಿದ್ದಾರೆ. 8 ಸಾವಿರ ಪೊಲೀಸರಿಗೆ ಕೋವಿಡ್ ಬಂದಿದೆ. 1500 ಆ್ಯಕ್ಟಿವ್ ಕೇಸ್ ಇದೆ. 73 ಮಂದಿ ಮೃತಪಟ್ಟಿದ್ದಾರೆಂದು ಇದೇ ವೇಳೆ ತಿಳಿಸಿದರು. (ದಿಗ್ವಿಜಯ ನ್ಯೂಸ್)