ದಿ.ಪ್ರವೀಣ್ ನೆಟ್ಟಾರು ಸ್ಮಾರಕದಲ್ಲಿ ಸ್ಮತಿ

praveen
ಅಂಕತಡ್ಕದಲ್ಲಿರುವ ದಿ.ಪ್ರವೀಣ್ ನೆಟ್ಟಾರು ಸ್ಮಾರಕ ವೀರ ಸಾವರ್ಕರ್ ವೃತ್ತದಲ್ಲಿ ಪ್ರವೀಣ್ ನೆಟ್ಟಾರು ಸ್ಮತಿ ನಡೆಯಿತು. ಇಂದಿರಾ ಬಿ.ಕೆ, ತಾರಾನಾಥ ಕಾಯರ್ಗ ಮೊದಲಾದವರಿದ್ದರು.
Published on

ಕಡಬ: ಪಾಲ್ತಾಡಿ ಗ್ರಾಮದ ಅಂಕತಡ್ಕದಲ್ಲಿರುವ ದಿ.ಪ್ರವೀಣ್ ನೆಟ್ಟಾರು ಸ್ಮಾರಕ ವೀರ ಸಾವರ್ಕರ್ ವೃತ್ತದಲ್ಲಿ ಬಿಜೆಪಿ ಬೂತ್ ಸಮಿತಿ 70ರ ವತಿಯಿಂದ ಪ್ರವೀಣ್ ನೆಟ್ಟಾರು ಸ್ಮತಿ ದಿನ ಇತ್ತೀಚೆಗೆ ಆಚರಿಸಲಾಯಿತು.

ಬಿಜೆಪಿ ಸುಳ್ಯ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ ಬಿ.ಕೆ, ಪ್ರವೀಣ್ ನೆಟ್ಟಾರು ಸಂಸ್ಮರಣೆ ಮಾಡಿದರು.

ಬಿಜೆಪಿ ಸವಣೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ತಾರಾನಾಥ ಕಾಯರ್ಗ, ಸುಳ್ಯ ಮಂಡಲ ಎಸ್.ಟಿ ಮೋರ್ಚಾ ಅಧ್ಯಕ್ಷ ಗಂಗಾಧರ ಪೆರಿಯಡ್ಕ, ಪಾಲ್ತಾಡಿ ಶಕ್ತಿ ಕೇಂದ್ರದ ಪ್ರಮುಖ್ ಅನ್ನಪೂರ್ಣ ಪ್ರಸಾದ್ ರೈ ಬೈಲಾಡಿ, ಸವಣೂರು ಗ್ರಾ.ಪಂ ಸದಸ್ಯ ಸತೀಶ್ ಅಂಗಡಿಮೂಲೆ, ಪ್ರವೀಣ್ ಕುಮಾರ್, ಬೂತ್ 71ರ ಅಧ್ಯಕ್ಷ ಜಯಪ್ರಶಾಂತ್ ಪಲ್ಲತಡ್ಕ, ಸವಣೂರು ಗ್ರಾ.ಪಂ ಸದಸ್ಯರಾದ ಭರತ್ ರೈ ಕಲಾಯಿ, ಚೇತನಾ ಶಿವಾನಂದ, ಹರೀಶ್ ಕಾಯರಗುರಿ, ಬೂತ್ 71ರ ಮಾಜಿ ಅಧ್ಯಕ್ಷ ಕರುಣಾಕರ ಸಾಲ್ಯಾನ್ ಕಲ್ಲಕಟ್ಟ ಮೊದಲಾದವರಿದ್ದರು.

ಬಳಿಕ ಪ್ರವೀಣ್ ನೆಟ್ಟಾರು ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net