ಪ್ರವರ ಥಿಯೇಟರ್ ದಶಕದ ಸಂಭ್ರಮ - ನಾಟಕೋತ್ಸವ

Pravara
Published on

ಬೆಂಗಳೂರು: ದಶಕದ ಸಂಭ್ರಮದಲ್ಲಿರುವ ಪ್ರವರ ಥಿಯೇಟರ್ ಆ. 25 ರಿಂದ 27ರವರೆಗೆ ‘ನಾಟಕೋತ್ಸವ’ ಹಮ್ಮಿಕೊಂಡಿದೆ.

ಬೆಂಗಳೂರಿನ ಹನುಮಂತನಗರದಲ್ಲಿನ ಕೆ.ಎಚ್. ಕಲಾಸೌಧದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ನಾಟಕೋತ್ಸವ ವೀಕ್ಷಿಸಲು ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.

ಆ. 25ರಂದು ಸಂಜೆ 5.30ಕ್ಕೆ ದಶಕದ ಸಂಭ್ರಮ ಕಾರ್ಯಕ್ರಮ ಉದ್ಘಾಟನೆಯಾಗಲಿದ್ದು, ಹಿರಿಯ ರಂಗಕರ್ಮಿ ಸಿ.ಕೆ. ಗುಂಡಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ವಿಶ್ವನಾಥ್ ಪಿ. ಹಿರೇಮಠ, ಲೇಖಕ ಜೋಗಿ, ಪ್ರಾಧ್ಯಾಪಕ ಡಾ. ಬಿ.ವಿ. ಅಜಯ್ ಪ್ರಕಾಶ್ ಭಾಗವಹಿಸಲಿದ್ದಾರೆ. 6ಕ್ಕೆ ಬೆಂಗಳೂರಿನ ಹತ್ತು ರಂಗತಂಡಗಳು ರಂಗಗೀತೆ ಪ್ರಸ್ತುತ ಪಡಿಸಲಿವೆ. 7.15ಕ್ಕೆ ಡಾ. ಶ್ರೀಪಾದ ಭಟ್ಟ ನಿರ್ದೇಶನದಲ್ಲಿ ಶ್ರೀರಂಗಪಟ್ಟಣ್ಣದ ನಿರ್ದಿಗಂತ ತಂಡದಿಂದ ‘ಗಾಯಗಳು’ ನಾಟಕ ಪ್ರದರ್ಶನ ನಡೆಯಲಿದೆ.

ಆ. 26ರಂದು ಸಂಜೆ 5.30ಕ್ಕೆ ‘ಸಮಕಾಲೀನ ರಂಗಭೂಮಿಯ ಸವಾಲುಗಳು ಮತ್ತು ನಮ್ಮ ಪ್ರತಿಸ್ಪಂದನೆ’ ವಿಷಯ ಕುರಿತು ಸಂವಾದ ನಡೆಯಲಿದೆ. ರಂಗಕರ್ಮಿಗಳಾದ ಹನು ರಾಮಸಂಜೀವ, ಛಾಯಾ ಭಾರ್ಗವಿ, ಪಿ.ಡಿ. ಸತೀಶ್ ಚಂದ್ರ, ಡಾ. ಬೇಲೂರು ರಘುನಂದನ್, ಅಭಿಮನ್ಯು ಭೂಪತಿ ಹಾಗೂ ಪತ್ರಕರ್ತೆ ಎನ್. ವಿಶಾಖ ಭಾಗವಹಿಸಲಿದ್ದಾರೆ. 6ಕ್ಕೆ ಯುವ ರಂಗಕರ್ಮಿ ಗೌತಮ್ ಉಪಾಧ್ಯಾಯ ಅವರಿಗೆ ಪ್ರವರ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕಿ ಬನಶಂಕರಿ ವಿ. ಅಂಗಡಿ ಭಾಗವಹಿಸಲಿದ್ದಾರೆ. 7.15ಕ್ಕೆ ಮಂಜುನಾಥ್ ಎಲ್. ಬಡೀಗೇರ್ ನಿರ್ದೇಶನದಲ್ಲಿ ನಿರಂತರ ೌಂಡೇಶನ್ ಕಲಾವಿದರುಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಆಯ್ದ ಕೃತಿಗಳ ಆಧಾರಿತ ನಾಟಕ ’ಗೊರೂರು’ ಪ್ರಸ್ತುತ ಪಡಿಸಲಿದ್ದಾರೆ.

ಆ. 27 ರಂದು ಸಂಜೆ 6.15ಕ್ಕೆ ದಶಕದ ಒಳನೋಟ ದೊಂದಿಗೆ ಸಮಾರೋಪ ನಡೆಯಲಿದೆ. ಪತ್ರಕರ್ತ ರವೀಂದ್ರ ಭಟ್, ನಗೆ ಬರಹಗಾರ ಎಂ.ಎಸ್. ನರಸಿಂಹಮೂರ್ತಿ, ರಂಗಕರ್ಮಿ ಮಾಲತೇಶ್ ಬಡಿಗೇರ, ದಿ ಸ್ಕಿಲ್ ್ಯಾಕ್ಟರಿ ಮುಖ್ಯಸ್ಥ ಜೇಕಬ್ ಸ್ವಾಮಿನಾಥನ್ ಪಾಲ್ಗೊಳ್ಳಲಿದ್ದಾರೆ. 7.15ಕ್ಕೆ ಜಯಂತ್ ಕಾಯ್ಕಿಣಿ ರಚನೆಯ, ಹನು ರಾಮಸಂಜೀವ ನಿರ್ದೇಶನದಲ್ಲಿ ಪ್ರವರ ಥಿಯೇಟರ್ ಕಲಾವಿದರು ‘ಜತೆಗಿರುವನು ಚಂದಿರ’ ನಾಟಕ ಪ್ರದರ್ಶನ ನೀಡಲಿದ್ದಾರೆ.

ವಿವರಗಳಿಗೆ: ಮೊ: 9886604420/ ವೆಬ್‌ಸೈಟ್: ಠಿಠಿ://ಡಿಡಿಡಿ.ಟ್ಟಚ್ಟಠಿಛಿಠ್ಟಿಛಿ.ಟ್ಟಜ ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net