ಕಟೀಲಿನಲ್ಲಿ ಪ್ರತಿಭಾ ಸೌರಭ ಕಾರ್ಯಕ್ರಮ

Kin_Prathibha Sourabha
Published on

ಕಟೀಲು: ಪುನರೂರು ಪ್ರತಿಷ್ಠಾನ ಆಶ್ರಯದಲ್ಲಿ ಜನವಿಕಾಸ ಸಮಿತಿ ಸಹಕಾರದಲ್ಲಿ ಪ್ರತಿಭಾ ಸೌರಭ- 2024 ಕಾರ್ಯಕ್ರಮ ಶನಿವಾರ ಕಟೀಲಿನ ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಸಭಾಭವನದಲ್ಲಿ ನಡೆಯಿತು.

ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಕಾರ್ಯಕ್ರಮ ಉದ್ಘಾಟಿಸಿ, ಪುನರೂರು ಪ್ರತಿಷ್ಠಾನ ಮಕ್ಕಳಿಗೆ ಸಂಸ್ಕಾರ ಹಾಗೂ ಸಂಸ್ಕೃತಿ ಕೊಡುವ ಕೆಲಸ ಮಾಡುತ್ತಿದೆ. ಮಕ್ಕಳ ಸೂಕ್ತ ಪ್ರತಿಭೆಯನ್ನು ಗುರುತಿಸಿ ಗೌರವಿಸುವ ಕಾರ್ಯ ಅಭಿನಂದನೀಯ ಎಂದರು.

ಪುನರೂರು ಪ್ರತಿಷ್ಠಾನದ ಗೌರವಾಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಕಿನ್ನಿಗೋಳಿಯ ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪ ಶುಭಾಶಂಸನೆಗೈದರು.

ಲಯನ್ಸ್ ಕ್ಲಬ್ ಬಪ್ಪನಾಡು ಇನ್‌ಸ್ಪೈರ್‌ನ ಅಧ್ಯಕ್ಷ ಬಿ.ಶಿವಪ್ರಸಾದ್, ಉದ್ಯಮಿ ಅವಿನಾಶ್ ರಾವ್ ಕಿನ್ನಿಗೋಳಿ, ಪ್ರಧಾನ ಕಾರ್ಯದರ್ಶಿ ಶ್ರೇಯಾ ಪುನರೂರು, ಜನ ವಿಕಾಸ ಸಮಿತಿ ಅಧ್ಯಕ್ಷ ಶಶಿಕರ ಕೆರೆಕಾಡು, ಸಮಿತಿಯ ಸದಸ್ಯರಾದ ದಾಮೋದರ್ ಶೆಟ್ಟಿ ಕೊಡೆತ್ತೂರು, ಅಕ್ಷತಾ ಶೆಟ್ಟಿ, ಆನಂದ್ ಮೇಲಾಂಟ ಮುಖ್ಯ ಅತಿಥಿಗಳಾಗಿದ್ದರು. ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು ಸ್ವಾಗತಿಸಿದರು. ಜಿತೇಂದ್ರ ವಿ.ರಾವ್ ನಿರೂಪಿಸಿದರು. ಭಟ್ ದೇಂದಡ್ಕ ವಂದಿಸಿದರು. ಬಳಿಕ ಪ್ರತಿಭಾ ಸೌರಭ- 2024 ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net