ಭವಿಷ್ಯದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಹಕಾರಿ

08-kkr,1(10-23
Published on

ಕಿಕ್ಕೇರಿ: ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಶೈಕ್ಷಣಿಕವಾಗಿ ಮುನ್ನೆಲೆಗೆ ತರುವುದು ಸಮಿತಿಯ ಉದ್ದೇಶ ಎಂದು ನಿವೃತ್ತ ಇಇ ಕೆ.ಎಸ್.ಸತ್ಯನಾರಾಯಣ ತಿಳಿಸಿದರು.


ಪಟ್ಟಣದಲ್ಲಿ ವಿಪ್ರ ಬಾಂಧವ ಸೇವಾ ಸಮಿತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಸಮುದಾಯದ ಪ್ರಗತಿ, ಏಳಿಗೆಗೆ ವಿಪ್ರ ಸಮುದಾಯ ಸಂಘಟಿತರಾಗಬೇಕು. ಭವಿಷ್ಯದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮುಖ್ಯ ಭೂಮಿಕೆ. ಸಮಿತಿ ನೀಡುವ ಪ್ರೋತ್ಸಾಹ ಓದಿಗೆ ಟಾನಿಕ್ ಇದ್ದಂತೆ. ಮುಂದಿನ ಪೀಳಿಗೆಗೆ ಇಂತಹ ಮಕ್ಕಳು ಆದರ್ಶವಾಗಬೇಕು ಎಂದರು.


ಸಮುದಾಯದ 10ನೇ ತರಗತಿ, ಮೆಡಿಕಲ್, ಇಂಜಿನಿಯರಿಂಗ್ ಮತ್ತಿತರ ಪದವಿ, ಸ್ನಾತಕೋತ್ತರ ಪ್ರತಿಭಾನ್ವಿತ ಹಾಗೂ ಬಡ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ, ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಹಲವು ಬಡವಿದ್ಯಾರ್ಥಿಗಳನ್ನು ಒಂದು ವರ್ಷದ ಅವಧಿಗೆ ಶೈಕ್ಷಣಿಕವಾಗಿ ದತ್ತು ತೆಗೆದುಕೊಳ್ಳಲಾಯಿತು.


ಸಮಿತಿ ಅಧ್ಯಕ್ಷ ಕೆ.ಎಸ್. ಅನಂತಸ್ವಾಮಿ, ಕೆ.ಬಿ.ವೆಂಕಟೇಶ್, ಶ್ರೀಹರಿ, ಕೆ.ಎಸ್.ಪರಮೇಶ್ವರಯ್ಯ, ಮಹಾಬಲಶರ್ಮ, ಮಹಾಬಲರಾವ್, ಮಧು, ಶಮಂತ್, ಭಾಗ್ಯಮ್ಮ, ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅರವಿಂದ ಕಾರಂತ್, ಡಾ.ಡಿ.ಎನ್.ಪ್ರಕಾಶ್, ಡಾ.ಮಧುಸೂದನ್, ಸಾಹಿತಿ ಡಾ.ಬಲ್ಲೇನಹಳ್ಳಿ ಮಂಜುನಾಥ್, ನಾಗರಾಜ ಭಾರ್ಗವ್, ಮೈಸೂರು ಹೊಯ್ಸಳ ಕರ್ನಾಟಕ ಬ್ರಾಹ್ಮಣ ಮಹಿಳಾ ಸಂಘ ಅಧ್ಯಕ್ಷೆ ಶ್ರೀಮತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net