ಇಂದು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

Published on

ಕೆ.ಆರ್.ಸಾಗರ: ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ತೆಗೆದುಕೊಂಡ ವಿದ್ಯಾರ್ಥಿಗಳು ಮತ್ತು ವಿವಿಧ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಸ್ತಿಪುರ ಗ್ರಾಮದ ಬಿಇಎಂಎಲ್- ಕೆ.ಆರ್.ಎಸ್ ಮುಖ್ಯರಸ್ತೆಯಲ್ಲಿರುವ ಕೆ.ಬಿ.ಎಲ್ ಸಿದ್ಧಿ ವಿನಾಯಕ ಟ್ರಸ್ಟ್ ವತಿಯಿಂದ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಸೆ. 7ರಂದು ವಿನಾಯಕ ದೇವಸ್ಥಾನದ ಆವರಣದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಆದುದ್ದರಿಂದ ಪ್ರತಿಭಾ, ಸಾಧಕ ವಿದ್ಯಾರ್ಥಿಗಳು ತಮ್ಮ ವಿವರವನ್ನೂ ನಮ್ಮ ಸಂಸ್ಥೆಯ ಇಂಜಿನಿಯರ್ ನಿತೀನ್ ಅವರ ವಾಟ್ಸ್‌ಆ್ಯಪ್ ಮುಖಾಂತರ ಅಥವಾ ಖುದ್ದಾಗಿ ಮೊಬೈಲ್ ನಂಬರ್: 99029 69424ಗೆ ತಲುಪಿಸಬೇಕೆಂದು ಕೆ.ಬಿ.ಎಲ್ ಸಿದ್ಧಿ ವಿನಾಯಕ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಡಾ.ಈ.ಸಿ.ನಿಂಗರಾಜ್‌ಗೌಡ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net