ವಿವಿಧ ಸ್ಪರ್ಧೆಗಳಲ್ಲಿ ಮಿಂಚಿದ ವಿವೇಕಾನಂದ ವಿದ್ಯಾನಿಕೇತನ ವಿದ್ಯಾರ್ಥಿಗಳು

IMG-20230914-WA0003
Published on


ವಿಜಯವಾಣಿ ಸುದ್ದಿಜಾಲ ಕಲಬುರಗಿ
ಶಿಕ್ಷಣ ಇಲಾಖೆಯಿಂದ ಮಂಗಳವಾರ ಆಯೋಜಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕರುಣೇಶ್ವರ ನಗರದ ವಿವೇಕಾನಂದ ವಿದ್ಯಾನಿಕೇತನ ಶಾಲೆ ಮಕ್ಕಳು ಅತಿ ಹೆಚ್ಚು ಬಹುಮಾನ ಗಳಿಸಿದ್ದಾರೆ.
೩೭ ಸ್ಪರ್ಧೆಗಳ ಪೈಕಿ ಶಾಲೆಯ ವಿದ್ಯಾರ್ಥಿಗಳು ವೈಯಕ್ತಿಕ ಸಾಧನೆಯ ಮೂಲಕ ೨೪ ಪ್ರಥಮ ಬಹುಮಾನ, ೧೦ ದ್ವಿತೀಯ ಹಾಗೂ ಐದು ತೃತೀಯ ಬಹುಮಾನ ಪಡೆದಿದ್ದಾರೆ ಎಂದು ಪ್ರಾಚಾರ್ಯ ಸಿದ್ದಪ್ಪ ಭಗವತಿ ತಿಳಿಸಿದ್ದಾರೆ.
೧-೪ನೇ ತರಗತಿ ವಿಭಾಗದಲ್ಲಿ ಅನನ್ಯ (ಕನ್ನಡ ಕಂಠಪಾಠ), ಚೇತನಾ (ಇಂಗ್ಲಿಷ್ ಕಂಠಪಾಠ), ಸುಬೋಧ (ಸಂಸ್ಕೃತ ಧಾರ್ಮಿಕ ಪಠಣ), ಸಂಗಮೇಶ (ಛದ್ಮವೇಷ),  ವೈಷ್ಣವಿ (ಕಥೆ ವಾಚನ) ಅನ್ವಿತಾ (ಅಭಿನಯ ಗೀತೆ), ಪ್ರಿಯಾ (ಕ್ಲೇ ಮಾಡಲಿಂಗ್) ಹಾಗೂ ಅನನ್ಯ ರಾಘವೇಂದ್ರ (ಭಕ್ತಿಗೀತೆ) ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ. ೫-೭ನೇ ತರಗತಿ ವಿಭಾಗದಲ್ಲಿ ಸಂಜನಾ (ಇಂಗ್ಲಿಷ್ ಕಂಠಪಾಠ), ಬದರಿನಾಥ ( ಸಂಸ್ಕೃತ ಧಾರ್ಮಿಕ ಪಠಣ) ಅಬೂಬ್ಕರ್ ಸಿದ್ದಿಕಿ (ಅರೇಬಿಕ್ ಧಾರ್ಮಿಕ ಪಠಣ) ಪ್ರೇರಣಾ (ಲಘು ಸಂಗೀತ ಪ್ರಸ್ತುತಿ) ಕೀರ್ತಿ (ಚಿತ್ರಕಲೆ ಮತ್ತು ಬಣ್ಣ ಹಚ್ಚುವಿಕೆ), ಕಾಂಚನಗAಗಾ (ಅಭಿನಯ ಗೀತೆ), ವೈಷ್ಣವಿ (ಕ್ಲೇ ಮಾಡಲಿಂಗ್) ಹಾಗೂ ಸಾಯಿಪ್ರಸಾದ್ (ಆಶು ಭಾಷಣ) ಪ್ರಥಮ ಬಹುಮಾನ ಗಳಿಸಿದ್ದಾರೆ ಎಂದು ವಿವರಿಸಿದ್ದಾರೆ.
೮-೧೦ನೇ ತರಗತಿಯಲ್ಲಿ ಸೂರ್ಯಮಿತ್ರ (ಇಂಗ್ಲಿಷ್ ಭಾಷಣ), ಸುದೇಷ್ಣ (ಸಂಸ್ಕೃತ ಧಾರ್ಮಿಕ ಪಠಣ), ಮಹ್ಮದ್ ಜಯೀದ್ (ಅರೇಬಿಕ್ ಧಾರ್ಮಿಕ ಪಠಣ), ನಿವೇದಿತಾ (ಜಾನಪದ ಗೀತೆ ಗಾಯನ), ವನ್ಯ (ಭರತನಾಟ್ಯ), ಪುನೀತ್ (ಛದ್ಮವೇಷ), ಈಶ್ವರಿ  (ಗಝಲ್ ಗಾಯನ) ಹಾಗೂ ಅರ್ಪಿತಾ ಮತ್ತು ತಂಡ (ಖವ್ವಾಲಿ ಪ್ರಸ್ತುತಿ) ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net