ಪ್ರತಿ ಮನೆಯಲ್ಲಿ ಶ್ರೀರಾಮ ಪೂಜೆ ನಡೆಯಲಿ

09-01-ಗೊರೇಬಾಳ-01
ಗೊರೇಬಾಳದಲ್ಲಿ ಸಾರ್ವಜನಿಕರಿಗೆ ಅಯೋಧ್ಯೆ ಮಂತ್ರಾಕ್ಷತೆ ಹಾಗೂ ಶ್ರೀರಾಮ ಮಂದಿರ ಉದ್ಘಾಟನೆ ಆಹ್ವಾನ ಪತ್ರಿಕೆಯನ್ನು ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ನೀಡಿದರು. ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಸರ್ವೇಶ್ವರರಾವ್, ಆರ್‌ಎಸ್‌ಎಸ್ ಕಾರ್ಯಕರ್ತ ಹನುಮಂತ, ಗ್ರಾಪಂ ಸದಸ್ಯ ಆರ್.ಸಂತೋಷಕುಮಾರ ಇತರರಿದ್ದರು.
Published on

ಗೊರೇಬಾಳ: ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯಲಿರುವ ಜ.22ರಂದು ಪ್ರತಿ ಮನೆಯಲ್ಲಿ ರಾಮನ ಪೂಜೆ ಮಾಡಿ ಸಂಜೆ ಐದು ದೀಪಗಳನ್ನು ಮನೆ ಮುಂದೆ ಹಚ್ಚಬೇಕೆಂದು ರೌಡಕುಂದ ಸಂಸ್ಥಾನ ಹಿರೇಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಗ್ರಾಮದ ಶರಣಬಸವೇಶ್ವರ ದೇವಸ್ಥಾನದಲ್ಲಿ ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ ಹಾಗೂ ಆಹ್ವಾನ ಪತ್ರಿಕೆಗೆ ವಿಶೇಷ ಪೂಜೆ ನೆರವೇರಿಸಿ ಭಕ್ತರಿಗೆ ವಿತರಿಸಿ ಸೋಮವಾರ ಮಾತನಾಡಿದರು. ಪ್ರಮುಖರಾದ ಬಸವರಾಜ ಸಾಲಗುಂದ, ಸುನಿಲ್, ವಿಶ್ವನಾಥ, ಸೂರಿಬಾಬು, ದೊಡ್ಡಮನಿ ಶರಣೇಗೌಡ, ಯಲ್ಲಪ್ಪ ಹಿರೇಕುರಬರ, ಎನ್.ಚನ್ನಬಸವಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net