ತುಮಕೂರಿನಲ್ಲಿ ಪ್ರತಿಭೆಗಳ ಕಾರಂಜಿ

Karanji_02
Published on

ತುಮಕೂರು: ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಗಳಲ್ಲಿ ತುಮಕೂರು ಶೈಕ್ಷಣಿಕ ಜಿಲ್ಲೆಯ ಮಕ್ಕಳ ಪ್ರತಿಭೆ ಅನಾವರಣಗೊಂಡಿತು. ಛದ್ಮವೇಷಧಾರಿ ಮಕ್ಕಳು ಪ್ರತಿಭಾ ಕಾರಂಜಿಯ ಪ್ರಮುಖ ಆಕರ್ಷಣೀಯವೆನಿಸಿದ್ದರು. ರಂಗೋಲಿ ಬಿಡಿಸುತ್ತಿದ್ದ ಮಕ್ಕಳು, ಮಣ್ಣಿನಲ್ಲಿ ವಿವಿಧ ಕಲಾಕೃತಿಗಳನ್ನು ಮಾಡುತ್ತಿದ್ದ ಮಕ್ಕಳು ತಮ್ಮೊಳಗಿನ ಪ್ರತಿಭೆ, ಕಲೆಯನ್ನು ಓರೆಗಚ್ಚಿದರು.

ನಗರದ ಶ್ರೀಸಿದ್ದಗಂಗಾ ಪ್ರೌಢಶಾಲಾ ಅವರಣದಲ್ಲಿ ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಗಳಿಗೆ ಚಾಲನೆ ನೀಡಿದ ಮೇಯರ್ ಎಂ.ಪ್ರಭಾವತಿ, ಮಕ್ಕಳ ಸಮಗ್ರ ವಿಕಾಸಕ್ಕೆ ಪೂರಕವಾದ ಕಾರ್ಯಕ್ರಮ ಪ್ರತಿಭಾ ಕಾರಂಜಿ. ಈ ಕಾರ್ಯಕ್ರಮ ನನ್ನ ಶಾಲಾ ದಿನಗಳನ್ನು ನೆನಪಿಸುತ್ತದೆ ಎಂದರು.

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ರಂಗಧಾಮಯ್ಯ, ಪಾಲಿಕೆ ಸದಸ್ಯ ಇನಾಯತ್‌ವುಲ್ಲಾ ಖಾನ್, ಬಿಇಒ ಡಾ.ಸೂರ್ಯಕಲಾ, ನೋಡಲ್ ಅಧಿಕಾರಿ ಲಾವಣ್ಯ, ಕೆ.ಕೃಷ್ಣಮೂರ್ತಿ, ಉಮಾದೇವಿ, ಲೋಕೇಶ್ ರೆಡ್ಡಿ, ತಿಮ್ಮೇಗೌಡ, ಹನುಮೇಶ್, ಪರಮೇಶ್ವರಪ್ಪ, ಉಮೇಶ್, ಟಿ.ಎಸ್.ಚಿಕ್ಕಣ್ಣ, ಮಹದೇವಯ್ಯ, ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

ಕಲೋತ್ಸವ ವಿಜೇತರ

ಜನಪದ ಗೀತೆ

ಪ್ರಥಮ- ಎಸ್.ಹೃತಿಕ್, ಎಸ್‌ಬಿಜಿ, ಸೊರವನಹಳ್ಳಿ , ತುರುವೇಕೆರೆ

ದ್ವಿತೀಯ- ಎನ್.ಜಿ.ಮೇಘನ, ಶ್ರೀ ಸಿದ್ದಗಂಗಾ ಪ್ರೌಢ ಶಾಲೆ, ಅದಲಗೆರೆ, ಗುಬ್ಬಿ

ತೃತೀಯ- ಕುಸುಮ, ಅಂಬೇಡ್ಕರ್ ವಸತಿ ಶಾಲೆ, ಸಾಸಲು ಗೊಲ್ಲರಹಟ್ಟಿ, ಚಿ.ನಾ.ಹಳ್ಳಿ

ರಂಗೋಲಿ

ಪ್ರಥಮ - ವರ್ಷಿಣಿ, ಶ್ರೀಗುರು ಪ್ರೌಢ ಶಾಲೆ, ಕೆ.ಬಿ.ಕ್ರಾಸ್

ದ್ವಿತೀಯ- ದೇವಿಕಾ, ಸರ್ಕಾರಿ ಪ್ರೌಢಶಾಲೆ, ಚಿಕ್ಕನಾಯಕನಹಳ್ಳಿ

ತೃತೀಯ- ಧನುಶ್ರೀ, ಸರ್ಕಾರಿ ಪ್ರೌಢಶಾಲೆ, ಕೆಂಪೇನಾಹಳ್ಳಿ

ರಸಪ್ರಶ್ನೆ

ಪ್ರಥಮ - ಸಿ.ಎನ್.ರೋಹಿತ್ ಮತ್ತು ಈಶ್ವರ್ ಕೆ ಅಯ್ಯರ್ ಚೇತನಾ ವಿದ್ಯಾಮಂದಿರ ತುಮಕೂರು

ದ್ವಿತೀಯ-ರೂಪೇಶ್ ಮತ್ತು ಡಿ.ಎಂ.ಮಿಥುನ್, ಎಂಡಿಆರ್‌ಎಸ್, ಗುಡ್ಡೇನಹಳ್ಳಿ ತುರುವೇಕೆರೆ

ತೃತೀಯ- ಸಿ.ವಿ.ಸುಹಾಸ್ ಮತ್ತು ಪಿ.ಎನ್.ಮೋಹನ್, ರೋಟರಿ ಪ್ರೌಢಶಾಲೆ ಚಿ.ನಾ.ಹಳ್ಳಿ

ಗಝಲ್

ಪ್ರಥಮ -ಶಾಜೀಯಾ ಖಾನಂ, ಸರ್ಕಾರಿ ಪ್ರೌಢಶಾಲೆ, ಪಿಎಚ್ ಕಾಲನಿ, ತುಮಕೂರು

ದ್ವಿತೀಯ-ಸಾದ್ದೀಖಾ ಬಾನು, ಶ್ರೀ ಸಿದ್ದೇಶ್ವರ ಪ್ರೌಢಶಾಲೆ, ಗುಬ್ಬಿ

ತೃತೀಯ- ವಿನಯ್, ಸರ್ಕಾರಿ ಪ್ರೌಢಶಾಲೆ, ಚಿಕ್ಕನಾಯಕನಹಳ್ಳಿ

ಭಾಷಣ (ಹಿಂದಿ)

ಪ್ರಥಮ -ಡಿ.ವಿವೇಕಾನಂದ, ವಾಸವಿ ಆಂಗ್ಲ ಶಾಲೆ, ಹುಳಿಯಾರು

ದ್ವಿತೀಯ-ಎಂ.ಕೆ.ಪೋಷಕ್, ಜಿಬಿಎಚ್‌ಎಸ್, ಚೇಳೂರು

ತೃತೀಯ-ತಸ್ಕಿನ್, ಚೇತನ ವಿದ್ಯಾ ಮಂದಿರ, ತುಮಕೂರು

ಭಾಷಣ (ಕನ್ನಡ)

ಪ್ರಥಮ-ಯಶಸ್ವಿನಿ, ಬಾಲಿಕ ಪ.ಪೂ.ಕಾಲೇಜು ತಿಪಟೂರು

ದ್ವಿತೀಯ-ಎಚ್.ಆರ್.ಚಂದನಾ, ಜ್ಞಾನಭಾರತಿ ಪ್ರೌಢಶಾಲೆ, ಹುಲಿಯೂರುದುರ್ಗ

ತೃತೀಯ-ಕೆ.ಅಕ್ಷತಾ, ಶ್ರೀ ಸತ್ಯ ಇಂಟರ್‌ನ್ಯಾಷನಲ್ ಶಾಲೆ, ತುಮಕೂರು

ಭರತನಾಟ್ಯ

ಪ್ರಥಮ-ಕೆ.ಎಲ್.ಭಾರ್ಗವಿ, ಜ್ಞಾನಭಾರತಿ ಪ್ರೌಢಶಾಲೆ. ಕುಣಿಗಲ್

ದ್ವಿತೀಯ-ಆರ್.ಧೃತಿ, ವಾಸವಿ ಆಂಗ್ಲ ಶಾಲೆ, ಹುಳಿಯಾರು

ತೃತೀಯ-ಎನ್.ಎಚ್.ವರ್ಷ, ಶ್ರೀ ವಿನಾಯಕ ಪ್ರೌಢಶಾಲೆ, ನಿಟ್ಟೂರು

ಆಶುಭಾಷಣ

ಪ್ರಥಮ-ದುರ್ಗಾಪ್ರಸಾದ್, ಎಸ್‌ಬಿಜಿ, ಸೊರವನಹಳ್ಳಿ

ದ್ವಿತೀಯ-ಕೆ.ವಿ.ಕುಸುಮ, ಕೆಪಿಎಸ್, ಅಮೃತೂರು

ತೃತೀಯ-ಪಿ.ಎಂ.ಗಾನವಿ, ಕಿತ್ತೂರು ರಾಣಿ ವಸತಿಶಾಲೆ, ಮೇಲನಹಳ್ಳಿ

ಭಾಷಣ(ಇಂಗ್ಲೀಷ್)

ಪ್ರಥಮ-ಎಲ್.ಸೌಮ್ಯಶ್ರೀ , ಬಾಲಿಕ ಪ.ಪೂ.ಕಾಲೇಜು, ತಿಪಟೂರು

ದ್ವಿತೀಯ-ಟಿ.ರಚನ, ವಿದ್ಯಾವಾರಿದಿ ಶಾಲೆ ಬಳ್ಳೆಕಟ್ಟೆ, ಚಿ.ನಾ.ಹಳ್ಳಿ

ತೃತೀಯ-ಸಾನಿಯಾ, ಕೆಪಿಎಸ್, ಹುಲಿಯೂರುದುರ್ಗ

ಧಾಮಿಕ ಪಠಣ(ಸಂಸ್ಕೃತ)

ಪ್ರಥಮ-ಡಿ.ಎಸ್.ಧಾತ್ರಿ, ಡ್ಯಾಫೋಡಿಲ್ಸ್ ಪ್ರೌಢಶಾಲೆ, ತುಮಕೂರು

ದ್ವಿತೀಯ-ಮನಿತ್, ಎಸ್‌ಬಿಜಿ, ಸೊರವನಹಳ್ಳಿ, ತುರುವೇಕೆರೆ

ತೃತೀಯ-ಸಿ.ಆರ್.ರೋಷಿಣಿ, ಜ್ಞಾನವರ್ಧಕ ವಿದ್ಯಾಮಂದಿರ ಚೇಳೂರು

ಚರ್ಚಾ ಸ್ಪರ್ಧೆ

ಪ್ರಥಮ-ಎಂ.ವೈ.ನಂದಿತಾ, ಶ್ರೀ ಸಿದ್ದಗಂಗಾ ಪ್ರೌಢಶಾಲೆ, ಅದಲಗೆರೆ

ದ್ವಿತೀಯ-ಬೇಬಿಶಾಲಿನಿ, ಕೆಪಿಎಸ್, ನೊಣವಿನಕೆರೆ

ತೃತೀಯ-ಸೌಮ್ಯ, ಸರ್ಕಾರಿ ಪ್ರೌಢಶಾಲೆ, ಊರುಕೆರೆ

ಕವನ /ಪದ್ಯವಾಚನ

ಪ್ರಥಮ-ಜೀವಿತಾ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕೊನೇಹಳ್ಳಿ , ತಿಪಟೂರು

ದ್ವಿತೀಯ-ಡಿ.ಎಸ್.ದಿವ್ಯ, ಮೊರಾರ್ಜಿ ದೇಸಾಯಿ ವಸತಿಶಾಲೆ, ಬಿಕ್ಕೆಗುಡ್ಡ , ಗುಬ್ಬಿ

ತೃತೀಯ-ಯಶಸ್, ಎಸ್‌ಎಸ್‌ಎಚ್‌ಎಸ್, ಕೆಸ್ತೂರು, ತುಮಕೂರು

ಛದ್ಮವೇಷ

ಪ್ರಥಮ-ಮೇಘನಾ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಬಿಕ್ಕೆಗುಡ್ಡ , ಗುಬ್ಬಿ

ದ್ವಿತೀಯ-ಕೆ.ಎನ್.ಮನೋಹರ್, ಅಂಬೇಡ್ಕರ್ ವಸತಿ ಪ್ರೌಢಶಾಲೆ, ಕ್ಯಾತಸಂದ್ರ

ತೃತೀಯ-ಯಶಸ್ವಿನಿ, ಸವೋದಯ ಪ್ರೌಢಶಾಲೆ, ಕುಣಿಗಲ್

ಭಾವಗೀತೆ

ಪ್ರಥಮ-ಕೆ.ಆರ್.ಧನುಷ್ ಕೆ.ಆರ್, ಸಿದ್ದಗಂಗಾ ಇಂಗ್ಲೀಷ್ ಶಾಲೆ, ಎಸ್‌ಎಸ್ ಮಠ,

ದ್ವಿತೀಯ-ಎಂ.ಮೊನಾಲ, ಜ್ಞಾನಭಾರತಿ ಪ್ರೌಢಶಾಲೆ, ಕುಣಿಗಲ್

ತೃತೀಯ-ಸಂದೇಶ್, ಇಂದಿರಾಗಾಂಧಿ ವಸತಿ ಶಾಲೆ, ಕಾರ್ತಿಕೆಹಾಳ್, ಚಿ.ನಾ.ಹಳ್ಳಿ.

ಭಾಷಣ (ಉರ್ದು)

ಪ್ರಥಮ-ಹರ್ಬಿಯಾ ಸಭಾ, ಬಾಲಿಕಾ ಜಿಜೆಸಿ, ತಿಪಟೂರು

ದ್ವಿತೀಯ-ಜುಹಾ ಕೌಸರ್, ಕೆಪಿಎಸ್ ಹುಲಿಯೂರು ದುರ್ಗ,

ತೃತೀಯ-ಉಮೇಹಾನಿ, ಜಿಜೆಸಿ ಪಿಹೆಚ್‌ಕಾಲೋನಿ, ತುಮಕೂರು

ಧಾರ್ಮಿಕ ಪಠಣ (ಅರೇಬಿಕ್)

ಪ್ರಥಮ-ಶಾಯಿಸ್ತಾ ಜಬೀನ್, ಕೆಕೆ ಕಾನ್ವೆಂಟ್, ತಿಪಟೂರು

ದ್ವಿತೀಯ-ವಾರಿಸ್ ಖಾನ್ ಮಗಾ, ಸರ್ಕಾರಿ ಪದವಿ ಪೂರ್ವ ಕಾಲೇಜು, ಕುಣಿಗಲ್

ತೃತೀಯ-ಜಿಯಾ ಉಲ್ಲಾ ರೆಹಮಾನ್, ಶ್ರೀ ಸಿದ್ದರಾಮೇಶ್ವರ ಪ್ರೌಢಶಾಲೆ, ಹೊದಲೂರು, ಗುಬ್ಬಿ

ಮಿಮಿಕ್ರಿ

ಪ್ರಥಮ-ಗಜೇಂದ್ರ ರಾವ್, ಎಸ್‌ಎಸ್‌ಆರ್‌ಎಚ್‌ಎಸ್, ಸಿದ್ದಗಂಗಾ ಮಠ

ದ್ವಿತೀಯ-ಮನೋಜ್ ಕುಮಾರ್, ಮುರಾರ್ಜಿ ದೇಸಾಯಿ ವಸತಿ ಶಾಲೆ, ಬಿಕ್ಕೆಗುಡ್ಡ,

ತೃತೀಯ-ನಾಗದರ್ಶನ್, ಕೆಂಕೆರೆ, ಚಿಕ್ಕನಾಯಕನಹಳ್ಳಿ

ಚಿತ್ರಕಲೆ

ಪ್ರಥಮ-ಎಂಕುಶಾಲ್, ಕೆಪಿಎಸ್ ಕಡಬ, ಗುಬ್ಬಿ

ದ್ವಿತೀಯ-ಮನೋಜ್, ಜಿಹೆಚ್‌ಎಸ್ ಹೆಬ್ಬೂರು

ತೃತೀಯ-ವಿಸ್ಮಯ, ಜಿಜೆಸಿ, ಬೋರನಕಣಿವೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net