ಕಾಂಗ್ರೆಸ್​ನವರಿಗೆ ಪಿತ್ತ ನೆತ್ತಿಗೆ ಏರಿದಂತೆ ಕಾಣುತ್ತಿದೆ: ಪ್ರಲ್ಹಾದ್​ ಜೋಶಿ

Pralhad Joshi
Published on

ಧಾರವಾಡ: ಕಾಂಗ್ರೆಸ್​ ಪಕ್ಷವೂ ಚುನಾವಣೆ ಸಂದರ್ಭದಲ್ಲಿ ಘೋಷಿಸಿದ್ದ ಗ್ಯಾರಂಟಿಗಳಿಗೆ ಷರತ್ತುಗಳನ್ನು ಹಾಕುವ ಮೂಲಕ ಯೋಜನೆಯನ್ನು ಯಾರಿಗೂ ಸಿಗದಂತೆ ಹುನ್ನಾರ ನಡೆಸುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಆರೋಪಿಸಿದ್ದಾರೆ.

ಈ ಕುರಿತು ಧಾರವಾಡದಲ್ಲಿ ಮಾತನಾಡಿದ ಸಚಿವ ಜೋಶಿ ಕಾಂಗ್ರೆಸ್​ ಸರ್ಕಾರ ಗ್ಯಾರಂಟಿಗಳಿಗೆ ಹೊಸ ಷರತ್ತುಗಳನ್ನು ವಿಧಿಸುವ ಮೂಲಕ ಯೋಜನೆಯನ್ನು ಯಾರಿಗೂ ಸಿಗದಂತೆ ಮಾಡಲು ಹುನ್ನಾರ ನಡೆಸಿದೆ. ನಿಯಮಗಳಿಂದಾಗಿ ಎಲ್ಲವೂ ಗೊಂದಲಮಯವಾಗಿ ಹೋಗಿದೆ ಎಂದು ಕಿಡಿಕಾರಿದ್ದಾರೆ.

ದಾರಿ ತಪ್ಪಿಸಬೇಡಿ

ಸಿದ್ದರಾಮಯ್ಯನವರಿಗೆ ನಾನು ಹೇಳುವುದೇನೆಂದರೆ ಅನ್ನಭಾಗ್ಯ ಯೋಜನೆ ಅಡಿ ಕೊಡುವ 10 ಕೆಜಿ ಅಕ್ಕಿ ಪೈಕಿ ಆಹಾರ ಭದ್ರತಾ ಕಾಯ್ದೆಯಡಿ ಕೇಂದ್ರ ಸರ್ಕಾರದ ವತಿಯಿಂದ 5 ಕೆಜಿ ಅಕ್ಕಿಯನ್ನು ಕೊಡಲಾಗುತ್ತದೆ. ಇದನ್ನು ನೀವು ಮೊದಲು ಜನತೆಗೆ ಸ್ಪಷ್ಟವಾಗಿ ಹೇಳಿ ಇಲ್ಲವಾದ್ದಲ್ಲಿ ಅಕ್ಕಿ ಬೇಡ ಎಂದು ಕೇಂದ್ರ ಸರ್ಕಾರಕ್ಕೆ ತಿಳಿಸಿ. ಒಂದು ವೇಳೆ ನೀವು ಜನತೆಗೆ ಇದನ್ನು ಹೇಳದಿದ್ದರೆ 15 ಕೆಜಿ ಅಕ್ಕಿಯನ್ನು ಉಚಿತವಾಗಿ ಕೊಡಿ ಈ ರೀತಿ ಸುಳ್ಳು ಹೇಳಿ ದಾರಿ ತಪ್ಪಿಸಬೇಡಿ.

ಕಾಂಗ್ರೆಸ್​ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿಗೆ ತಂದ ಬಳಿಕ ನೆಪವನ್ನು ಹೇಳುತ್ತಿದ್ದಾರೆ. ಪ್ರತಿಯೊಂದು ವಿಚಾರದಲಗಲಿ ಸುಳ್ಳು ಹೇಳಿ ಜನರ ದಾರಿ ತಪ್ಪಿಸಿ ಮತ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಪಿತ್ತ ನೆತ್ತಿಗೇರಿದೆ

ಚಕ್ರವರ್ತಿ ಸೂಲಿಬೆಲೆಗೆ ಸಚಿವ ಎಂ.ಬಿ. ಪಾಟೀಲ್​ ಎಚ್ಚರಿಕೆ ನೀಡಿರುವ ಕುರಿತು ಪ್ರತಿಕ್ರಿಯಿಸಿ ಮೊದಲಿಗೆ ಅವರು ಮಾತನಾಡಿರುವ ಭಾಷೆಯ ಕುರಿತು ಕ್ಷಮೆಯಾಚಿಸಬೇಕು. ಕಾಂಗ್ರೆಸ್​ನವರು ಈ ಹಿಂದೆ ಮೋದಿ ವಿರುದ್ಧ ಅಯೋಗ್ಯವಾದ ಭಾಷೆ ಬಳಸಿದ್ದರು ಆಗಲೂ ಕೇಂದ್ರದಲ್ಲಿ ನಮ್ಮ ಸರಕಾರವಿತ್ತು. ನಾವು ಸಂಯಮದಿಂದ ವರ್ತಿಸಿದ್ದೇವೆ.

ಪ್ರಜಾಪ್ರಭುತ್ವದಲ್ಲಿ ಟೀಕೆ-ಟಿಪ್ಪಣೆಗಳು ಸಹಜ ಇವರು ಮಾಡುತ್ತಿರುವುದನ್ನು ನೋಡಿ ಹಿಟ್ಲರ್ ಸರಕಾರ ಅಂತಾ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ. ಅಷ್ಟಕ್ಕೇ ಜೈಲಿಗೆ ಹಾಕುತ್ತೇವೆ ಅಂದರೆ ಹೇಗೆ ಇದು ದುರಹಂಕಾರದ ಮಾತು ಇವರಿಗೆ ಪಿತ್ತ ನೆತ್ತಿಗೆ ಏರಿದೆ ಅದಕ್ಕಾಗಿ ಹೀಗೆ ಮಾತನಾಡುತ್ತಿದ್ದಾರೆ. ಮುದಂಇನ ದಿನಗಳಲ್ಲಿ ಜನ ಇದಕ್ಕೆ ಉತ್ತರ ಕೊಡುತ್ತಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net