ಸೃಜನಶೀಲ ಸಹಪಠ್ಯ ವಿಷಯಗಳಿಂದ ಬುದ್ಧಿ ವಿಕಾಸ

darshan
Published on

ಪಡುಬಿದ್ರಿ: ಮಕ್ಕಳಿಗೆ ಪಠ್ಯವಲ್ಲದೆ ಇಂತಹ ಸೃಜನಶೀಲ ಸಹಪಠ್ಯ ವಿಷಯಗಳಿಗೆ ಅವಕಾಶ ನೀಡಿದರೆ ಅವರ ಬುದ್ಧಿ ಇನ್ನಷ್ಟು ವಿಕಾಸವಾಗುತ್ತದೆ ಎಂದು ಪೂರ್ಣಪ್ರಜ್ಞ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಪ್ರತಿನಿಧಿ ಪ್ರೊ.ನಿತ್ಯಾನಂದ ಹೇಳಿದರು.

ಅದಮಾರಿನ ಸುತ್ತಮುತ್ತಲಿನ ಎಲ್ಲ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗಾಗಿ ಅದಮಾರು ಪೂರ್ಣಪ್ರಜ್ಞ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ‘ಪ್ರಜ್ಞಾ ದರ್ಶನಂ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳೇ ರಚಿಸಿದ ಚಿತ್ರಕಲೆ, ಕರಕುಶಲ ವಸ್ತುಗಳು, ವಿಜ್ಞಾನ ಮಾದರಿ, ಪ್ರಯೋಗಗಳು ಹಾಗೂ ವಿದ್ಯಾರ್ಥಿಗಳೇ ಸಂಗ್ರಹಿಸಿದ ಪ್ರಾಚ್ಯ ವಸ್ತುಗಳ ಪ್ರದರ್ಶನ ಗಮನ ಸೆಳೆಯಿತು.

ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸಂಜೀವ ನಾಯ್ಕ, ಆಂಗ್ಲ ಮಾಧ್ಯಮ ಪ್ರೌಢಶಾಲೆ ಮುಖ್ಯ ಶಿಕ್ಷಕ ಮಂಜುನಾಥ ಎ.ವಿ., ಕನ್ನಡ ಮಾಧ್ಯಮ ಪ್ರೌಢಶಾಲೆ ಮುಖ್ಯ ಶಿಕ್ಷಕ ಶ್ರೀಕಾಂತ್ ರಾವ್ ಉಪಸ್ಥಿತರಿದ್ದರು. ಪೂರ್ಣಪ್ರಜ್ಞ ಕನ್ನಡ ಮಾಧ್ಯಮ ಪ್ರೌಢಶಾಲೆ ಆಂಗ್ಲ ಭಾಷಾ ಶಿಕ್ಷಕಿ ಪ್ರತಿಮಾ ಭಟ್ ಸ್ವಾಗತಿಸಿದರು. ಹಿಂದಿ ಶಿಕ್ಷಕಿ ಉಷಾ ವಂದಿಸಿದರು. ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು ಕನ್ನಡ ಉಪನ್ಯಾಸಕ ದೇವಿಪ್ರಸಾದ್ ಬೆಳ್ಳಿಬೆಟ್ಟು ‘ನಮ್ಮ ಸಂಸ್ಥೆ ನಮ್ಮ ವೈಶಿಷ್ಟೃ’ ವಿಷಯದಲ್ಲಿ ಉಪನ್ಯಾಸ ನೀಡಿದರು. ಸಮಾರೋಪ ಸಮಾರಂಭದಲ್ಲಿ ಪಡುಬಿದ್ರಿ ಗಣಪತಿ ಪ್ರೌಢಶಾಲೆ ನಿವೃತ್ತ ಮುಖ್ಯ ಶಿಕ್ಷಕ ಗಣಪತಿ ಭಟ್ ಸಮಾರೋಪ ಭಾಷಣ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net