

ಸಿದ್ದಾಪುರ: ಸಿದ್ದಾಪುರ ಹಿರಿಯ ನಾಗರಿಕರ ವೇದಿಕೆ ಮಾಸಿಕ ಸಭೆ, ಕೊಡುಗೆ ಹಸ್ತಾಂತರ ಕಾರ್ಯಕ್ರಮ ಸಿದ್ದಾಪುರ ಹಿರಿಯ ನಾಗರಿಕರ ವೇದಿಕೆ ಅನುಭವ ಮಂಟಪದಲ್ಲಿ ಇತ್ತೀಚೆಗೆ ನಡೆಯಿತು.
ಸಿದ್ದಾಪುರ ದಶಭುಜ ಶ್ರೀ ಮಹಾಗಣಪತಿ ದೇವಸ್ಥಾನದ ಮೊಕ್ತೇಸರ ಸದಾನಂದ ಭಟ್ ಧ್ವನಿವರ್ಧಕ ಕೊಡುಗೆಯಾಗಿ ನೀಡಿದರು. ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಡಿ.ಗೋಪಾಲಕೃಷ್ಣ ಕಾಮತ್ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ಎಚ್.ಭೋಜ ಶೆಟ್ಟಿ, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಮಣಿಪಾಲ ಸೈಬರ್ ಸೆಕ್ಯೂರಿಟಿ ಸಂಸ್ಥೆ ವ್ಯವಸ್ಥಾಪಕ ರಾಘವೇಂದ್ರ ಮೊಬೈಲ್ ಬಳಕೆ, ಸೈಬರ್ ಕ್ರೈಂ ಬಗ್ಗೆ ಮಾಹಿತಿ ನೀಡಿದರು. ನಿವೃತ್ತ ಮುಖ್ಯ ಶಿಕ್ಷಕ ರಾಜೀವ ಶೆಟ್ಟಿ ಶಾನ್ಕಟ್ಟು ಕಾರ್ಯಕ್ರಮ ನಿರೂಪಿಸಿದರು. ಟಿ.ಜಿ. ಪಾಂಡುರಂಗ ಪೈ ವಂದಿಸಿದರು.