

ಹೆಬ್ರಿ: ಮನುಷ್ಯ ಮೊದಲು ಸುಸಂಸ್ಕೃತನಾಗಬೇಕು. ದೇವರ ಸ್ಮರಣೆ ನಿರಂತರವಾಗಿ ಮಾಡುತ್ತಾ ಸಾಗಬೇಕಾಗಿದೆ. ಸ್ಮರಣೆಗೆ ಯಾವುದೇ ಕಾಲದ ಮಿತಿ ಇಲ್ಲ. ನಮ್ಮನ್ನು ನಾವು ಶುದ್ಧಿ ಮಾಡಿಕೊಳ್ಳಬೇಕಾದರೆ ದೇವರಸ್ತುತಿ ಬಹಳ ಮುಖ್ಯ ಎಂದು ಧಾರ್ಮಿಕ ಪ್ರವಚನಕಾರ ಓಂ ಪ್ರಕಾಶ್ ಭಟ್ ಹೇಳಿದರು.
ಶಾಂತಿನಿಕೇತನದ ವತಿಯಿಂದ ಭಾನುವಾರ ಜ್ಞಾನ ದೇವಿಗೆ ಸರಣಿ ಕಾರ್ಯಕ್ರಮದಲ್ಲಿ ಅದಮಾರು ಮಠದಿಂದ ಸ್ವಾಮೀಜಿಗಳು ಕೃಷ್ಣ ಜಪ ಮಾಡಿದವರಿಗೆ ನೀಡಿದ ಪ್ರಸಾದವನ್ನು ವಿತರಿಸಿ ಮಾತನಾಡಿದರು.
ಎಲ್ಲರು ಒಂದಾಗಿ ಸಮಾಜದಲ್ಲಿ ಬಾಳಬೇಕು. ವ್ಯವಸ್ಥಿತ ದೇಶ ಕಟ್ಟಲು ಉತ್ತಮ ಪ್ರಜೆಗಳ ಅಗತ್ಯವಿರುವದರಿಂದ ನಾವೆಲ್ಲರೂ ಕಟಿಬದ್ಧರಾಗಬೇಕು ಎಂದರು.
ಶಾಂತಿನಿಕೇತನದ ವತಿಯಿಂದ ಓಂಪ್ರಕಾಶ್ ಹಾಗೂ ರೂಪಾ ದಂಪತಿಯನ್ನು ಸನ್ಮಾನಿಸಲಾಯಿತು. ಶಾಂತಿನಿಕೇತನ ನಿಯೋಜಿತ ಅಧ್ಯಕ್ಷ ಮಹೇಶ್, ಸಿಇಒ ನರೇಂದ್ರ, ಆಡಳಿತ ಮಂಡಳಿ ಸದಸ್ಯರಾದ ರಾಜೇಶ್ರೀ, ವಿನೋದ, ಕಲಾವತಿ, ನಿತಿನ್, ಆಶಾ, ಚಂದ್ರಾವತಿ, ಮೀನಾಕ್ಷಿ, ಪೂರ್ಣಿಮಾ ಉಪಸ್ಥಿತರಿದ್ದರು.