ಸಮಯ ಸದ್ಭಳಕೆಯೊಂದಿಗೆ ಧರ್ಮ ಪರಿಪಾಲನೆ

sankranti
Published on

ಹೆಬ್ರಿ: ವಿದ್ಯಾರ್ಥಿಗಳು ಸಮಯದ ಸದ್ಭಳಕೆ ಮಾಡಬೇಕು. ಉತ್ತಮ ಸ್ನೇಹಿತರ ಒಡನಾಟದೊಂದಿಗೆ, ಜಂಕ್‌ಫುಡ್ ದಾಸರಾಗಬೇಡಿ. ಸನಾತನ ಧರ್ಮ ಪರಿಪಾಲನೆ ಅಗತ್ಯ ಎಂದು ಮಂಗಳೂರು ವಿಭಾಗದ ಕುಟುಂಬ ಪ್ರಬೋಧಿನಿ ಸ್ವರ್ಣ ಹೇಳಿದರು.

ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿಭಾಗದಲ್ಲಿ ಮಕರ ಸಂಕ್ರಾಂತಿ ಹಬ್ಬ ಆಚರಣೆಯಲ್ಲಿ ಮಾತನಾಡಿದರು.

ಅಮೃತ ಭಾರತಿ ವಿದ್ಯಾಲಯ ಆಡಳಿತ ಮಂಡಳಿ ಅಧ್ಯಕ್ಷ ಶೈಲೇಶ್ ಕಿಣಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕರಾದ ಅಪರ್ಣಾ ಆಚಾರ್, ಶಕುಂತಳಾ ಉಪಸ್ಥಿತರಿದ್ದರು. ದೇವಿಕಾ ವಂದಿಸಿ, ಅಕ್ಷತಾ ಸ್ವಾಗತಿಸಿದರು. ಸಾನ್ವಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net