ಪಿಪಿಸಿ ಸಮೂಹ ಸಂಸ್ಥೆ ನಿರ್ದೇಶಕರಾಗಿ ಶ್ರೀರಮಣ ಐತಾಳ್ ಅಧಿಕಾರ ಸ್ವೀಕಾರ

ppc
ಪೂರ್ಣಪ್ರಜ್ಞ ಸಮೂಹ ಸಂಸ್ಥೆಗಳ ಅಭಿವೃದ್ಧಿ ಹಾಗೂ ವಿಸ್ತರಣೆ ವಿಭಾಗದ ನಿರ್ದೇಶಕರಾಗಿ ಡಾ.ಪಿ.ಶ್ರೀರಮಣ ಐತಾಳ್ ಅಧಿಕಾರ ಸ್ವೀಕರಿಸಿದರು
Published on

ವಿಜಯವಾಣಿ ಸುದ್ದಿಜಾಲ ಉಡುಪಿ

ಪೂರ್ಣಪ್ರಜ್ಞ ಸಮೂಹ ಸಂಸ್ಥೆಗಳ ಅಭಿವೃದ್ಧಿ ಹಾಗೂ ವಿಸ್ತರಣೆ ವಿಭಾಗ ನಿರ್ದೇಶಕರಾಗಿ ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯದ ನಿವೃತ್ತ ಸ್ಥಾಪಕ ಕುಲಪತಿ ಡಾ.ಪಿ.ಶ್ರೀರಮಣ ಐತಾಳ್ ಶನಿವಾರ ಅಧಿಕಾರ ಸ್ವೀಕರಿಸಿದರು. ಅವರಿಗೆ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಲಹೆಗಾರರಾಗಿ ಹಾಗೂ ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಅಫ್ ವ್ಯಾನೇಜ್‌ಮೆಂಟ್ ನಿರ್ದೇಶಕರಾಗಿ ಹೆಚ್ಚುವರಿ ಹೊಣೆ ವಹಿಸಲಾಗಿದೆ.

ಪೂರ್ಣಪ್ರಜ್ಞ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಡಾ.ಎ.ಪಿ.ಭಟ್, ಕಾರ್ಯದರ್ಶಿ ಡಾ.ಚಂದ್ರಶೇಖರ್, ಕೋಶಾಧಿಕಾರಿ ಸಿಎ ಪ್ರಶಾಂತ್ ಹೊಳ್ಳ, ಪಿಐಎಂ ಪೂರ್ವ ನಿರ್ದೇಶಕ ಡಾ.ಎಂ.ಆರ್.ಹೆಗಡೆ, ಅದವಾರು ಪಿ.ಯು ಕಾಲೇಜಿನ ಕಾರ್ಯದರ್ಶಿ ಡಾ.ಶ್ರೀಧರ್ ರಾವ್ ಮೊದಲಾದವರು ಉಪಸ್ಥಿತರಿದ್ದರು. ಕಾಲೇಜಿನ ನಿರ್ದೇಶಕರಾಗಿ ಸೇವೆಯಿಂದ ನಿವೃತ್ತರಾದ ಡಾ.ಭರತ್ ವಿ. ಅವರನ್ನು ಗೌರವಿಸಲಾಯಿತು. ಪಿಪಿಸಿ ಪ್ರಾಂಶುಪಾಲ ಡಾ.ರಾಮು ವಂದಿಸಿದರು. ಪಿಐಎಂ ಉಪನ್ಯಾಸಕಿ ಡಾ.ಭಾರತಿ ಕಾರಂತ್ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net