

ಬಿಡದಿ : ಪಟ್ಟಣದ ಹಲವು ರಸ್ತೆಗಳಲ್ಲಿ ುಟ್‌ಪಾತ್ ಮೇಲೆ ಅನಧಿಕೃತವಾಗಿ ಅಂಗಡಿ ನಿರ್ಮಿಸಿಕೊಂಡು ಸರ್ಕಾರಿ ಜಾಗ ಒತ್ತುವರಿ ಹಾಗೂ ರಸ್ತೆಗೆ ಹಾಕಿದ್ದ ಶೀಟ್‌ಗಳನ್ನು ಬುಧವಾರ ಬೆಳ್ಳಂಬೆಳಗ್ಗೆ ಪುರಸಭಾ ಅಧಿಕಾರಿಗಳು ತೆರವುಗೊಳಿಸಿದ್ದಾರೆ.
ರಸ್ತೆ ಮುಂದಕ್ಕೆ ಶೀಟ್ ಹಾಕಿಕೊಂಡು ಜನರ ಸುಗಮ ಸಂಚಾರಕ್ಕೆ ಅಡ್ಡಿ ಮಾಡಿದ್ದ ಹಿನ್ನೆಲೆಯಲ್ಲಿ ಪುರಸಭಾ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ತೆರವು ಕಾರ್ಯಚರಣೆ ನಡೆಸಿದರು. ಫುಟ್‌ಪಾತ್ ಮೇಲಿನ ಅಂಗಡಿಗಳನ್ನು ತೆರವುಗೊಳಿಸುವ ಮೂಲಕ ಫುಟ್‌ಪಾತ್ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
ಮುಂಜಾನೆ ಜೆಸಿಬಿಗಳ ಸದ್ದು : ಪಟ್ಟಣದ ಪ್ರಮುಖ ರಸ್ತೆಗಳಲ್ಲಿನ ುಟ್‌ಪಾತ್ ತೆರವು ಮಾಡುವ ಸಂಬಂಧ ಪುರಸಭಾ ಅಧಿಕಾರಿಗಳು ರಾತ್ರಿಯೇ ಎಲ್ಲ ರೀತಿಯಲ್ಲೂ ಸಿದ್ಧಗೊಂಡಿದ್ದರು. ಹಾಗಾಗಿ ಮುಂಜಾನೆ 6 ಗಂಟೆ ಸರಿಯಾಗಿ ಜೆಸಿಬಿ ಸಮೇತ ಬಂದು ತೆರವು ಮಾಡುವ ಕೆಲಸ ಪ್ರಾರಂಭಿಸಿದರು. 5ಕ್ಕೂ ಹೆಚ್ಚು ಜೆಸಿಬಿಗಳು ಒಮ್ಮೆಲೆ ಹಲವು ಭಾಗಗಳಲ್ಲಿ ಕಾರ್ಯಚರಣೆ ಪ್ರಾರಂಭ ಮಾಡಿದ್ದವು.
ಬಿಡದಿ ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಲೋಹೀತ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಾಮಾನ್ಯ ಸಭೆಯಲ್ಲಿ ಫುಟ್‌ಪಾತ್ ತೆರವು ಮಾಡುವ ಸಂಬಂಧ ಚರ್ಚೆ ನಡೆದು ಸದಸ್ಯರು ತೆರವು ಮಾಡುವ ಕೆಲಸಕ್ಕೆ ಜೈ ಎಂದಿದ್ದರು. ಇದರ ಭಾಗವಾಗಿ ಯಾವ ಯಾವ ಕಡೆ ಒತ್ತುವರಿ ಹಾಗೂ ಅಂಗಡಿಗಳ ಮುಂದೆ ಛಾವಣಿಯಲ್ಲಿ ಶೀಟ್‌ಗಳನ್ನು ಹಾಕೊಂಡಿರುವವರಿಗೆ ನೋಟಿಸ್ ನೀಡಲಾಗಿತ್ತು. ನೀವಾಗೆ ನೀವು ತೆರವು ಮಾಡಿಕೊಳ್ಳಿ ಎಂದು ನೋಟಿಸ್‌ನಲ್ಲಿ ಗಡುವು ನೀಡಲಾಗಿತ್ತು. ಗಡವು ಸಮಯ ಮುಗಿದರೂ ತೆರವು ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಪುರಸಭಾ ಅಧ್ಯಕ್ಷ ಎಂ.ಎನ್.ಹರಿಪ್ರಸಾದ್ ನೇತೃತ್ವದಲ್ಲಿ ತೆರವು ಕೆಲಸಕ್ಕೆ ಚಾಲನೆ ನೀಡಲಾಯಿತು. ಕಳೆದ ಎರಡು ದಿನಗಳ ಹಿಂದೆಯೆ ಪುರಸಭಾ ಅಧಿಕಾರಿಗಳು ಒತ್ತುವರಿಯಾಗಿರುವ ಜಾಗಗಳನ್ನ ಅಳತೆ ಮಾಡಿ ಮಾರ್ಕ್ ಮಾಡಲಾಗಿತ್ತು.
ಹಲವು ಕಡೆ ತೆರವು : ಪ್ರಮುಖವಾಗಿ ಬಿಜಿಎಸ್ ವೃತದಿಂದ ಬಿಡದಿ ಠಾಣೆವರೆಗೆ ತಲೆ ಎತ್ತಿದ್ದ ತಟ್ಟೆ ಇಡ್ಲಿ ಹೋಟೆಲ್ಗಳು, ಬಿಜಿಎಸ್‌ವೃತ್ತದಿಂದ ತಿಮ್ಮಪ್ಪನ ಕೆರೆವರೆಗೆ, ಮೀನಿನ ಅಂಗಡಿಯಿಂದ ಪ್ರಥಮ ದರ್ಜೆ ಕಾಲೇಜಿನ ರಸ್ತೆಯಲ್ಲಿ ಫುಟ್‌ಪಾತ್ ಮೇಲೆ ಇಟ್ಟಿದ್ದ ಅಂಗಡಿಗಳನ್ನು ಹಾಗೂ ಅಂಗಡಿ ಮುಂದೆ ಹಾಕಲಾಗಿದ್ದ ಕಬ್ಬಿಣದ ಶೀಟ್‌ಗಳನ್ನು ತೆರವು ಮಾಡಿದರು.
ಅಂಗಡಿ ಮಾಲೀಕರ ವಿರೋಧ : ಪುರಸಭೆಯಿಂದ ಫುಟ್‌ಪಾತ್ ಮೇಲೆ ಬಹಳ ವರ್ಷಗಳಿಂದ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದರು. ಈಗ ಏಕಾಏಕಿ ಪುರಸಭಾ ಅಧಿಕಾರಿಗಳು ಜೆಸಿಬಿ ಯಂತ್ರಗಳ ಸಮೇತ ಅಂಗಡಿಗಳ ಮುಂದೆ ಬಂದ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕರು ಕಕ್ಕಾಬಿಕ್ಕಿಯಾಗಿದರು. ಅಂಗಡಿ ಮಾಲೀಕರು ನಮಗೆ ಸಮಯಾವಕಾಶ ನೀಡಿ ಅಂಗಡಿ ತೆರವು ಮಾಡಿಕೊಳ್ಳುತ್ತೇವೆ ಎಂದು ಪರಿಪರಿಯಾಗಿ ಕೇಳಿಕೊಂಡರು. ಯಾವುದೇ ಮುಲಾಜಿಲ್ಲಾದೆ ತೆರವು ಮಾಡಿದರು. ಪುರಸಭಾ ಅಧ್ಯಕ್ಷ ಎಂ.ಎನ್. ಹರಿಪ್ರಸಾದ್, ಉಪಾಧ್ಯಕ್ಷೆ ಮಂಜುಳಾ, ಸದಸ್ಯರಾದ ಉಮೇಶ್, ರಾಕೇಶ್, ನಾಗರಾಜು, ಕುಮಾರ್, ನವೀನ್, ಹೊಂಬಣ್ಣ, ಶ್ರೀನಿವಾಸ್ ಸೇರಿ ಪುರಸಭಾ ಸಿಬ್ಬಂದಿ ಇದ್ದರು.
ಬಿಡದಿ ಪಟ್ಟಣ ಬೆಂಗಳೂರಿಗೆ ಹತ್ತಿರ ಇದೆ. ಅಲ್ಲದೇ ದಿನದಿಂದ್ದಿನಕ್ಕೆ ವೇಗವಾಗಿ ಬೆಳೆಯುತ್ತಿದೆ. ಈ ನಿಟ್ಟಿನಲ್ಲಿ ಪಟ್ಟಣ ಅಂದವಾಗಿ ಕಾಣಬೇಕು ಎಂಬುದನ್ನು ಮನದಲ್ಲಿಟ್ಟುಕೊಂಡು ಫುಟ್‌ಪಾತ್ ಮೇಲಿನ ಅಂಗಡಿಗಳನ್ನು ತೆರವು ಮಾಡುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಕೆಲ ಕಡೆ ಅಂಗಡಿಗಳನ್ನು ತೆರವು ಮಾಡಲಾಗಿದೆ. ಇದಕ್ಕೆ ಸರ್ವ ಸದಸ್ಯರು ಬೆಂಬಲ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಪಟ್ಟಣದ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಗೆ ಯೋಜನೆ ಸಿದ್ಧವಿದೆ. ಈ ನಿಟ್ಟಿನಲ್ಲಿ ತೆರವು ಕಾರ್ಯ ಮಾಡಲಾಗಿದೆ. ಎಂ.ಎನ್.ಹರಿಪ್ರಸಾಸ್, ಪುರಸಭಾ ಅಧ್ಯಕ್ಷ ಬಿಡದಿ ಪ್ರರಸಭೆ ವ್ಯಾಪ್ತಿಯ ಕೆಲವು ರಸ್ತೆಗಳಲ್ಲಿ ಫುಟ್‌ಪಾತ್ ಅತಿಕ್ರಮಣವಾಗಿತ್ತು. ಅಂಗಡಿಗಳ ಮುಂದೆ ಕಬ್ಬಿಣದ ಶೀಟ್ ಹಾಕಿಕೊಂಡಿದ್ದರು. ಈ ಬಗ್ಗೆ ಪುರಸಭೆಗೆ ಸಾಕಷ್ಟು ದೂರು ಬಂದಿದ್ದವು. ಇದೇ ವಿಚಾರವಾಗಿ ಸ್ಥಾಯಿ ಸಮಿತಿ ಸಭೆಯಲ್ಲು ಚರ್ಚೆ ನಡೆದು ತೆರವು ಮಾಡಲು ನಿರ್ಧಾರ ಮಾಡಲಾಗಿತ್ತು. ಹಾಗಾಗಿ ಅತಿಕ್ರಮಣವಾಗಿರುವ ಜಾಗವನ್ನು ಅಳತೆ ಮಾಡಿ ತೆರವು ಮಾಡಲು ಸೂಚಿಸಲಾಗಿತ್ತು. ಆದರೂ, ತೆರವು ಮಾಡಿಕೊಂಡರಲಿಲ್ಲ. ಹಾಗಾಗಿ ಅಧ್ಯಕ್ಷರು, ಸದಸ್ಯರ ಸಮುಖದಲ್ಲಿ ತೆರವು ಕಾರ್ಯ ಮಾಡಲಾಗಿದೆ. ಕೆ.ಜಿ.ರಮೇಶ್, ಪುರಸಭಾ ಮುಖ್ಯಾಧಿಕಾರಿ