ಇಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

s_636777717725693583_Power_Cut
Published on

ಮದ್ದೂರು: 66/11 ಕೆ.ವಿ. ಮದ್ದೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ 66 ಕೆ.ವಿ. ಮಂಡ್ಯ ಮಾರ್ಗ ಹಾಗೂ ಕೆಐಎಡಿಬಿ ಸೋಮನಹಳ್ಳಿ 66 ಕೆ.ವಿ. ಮಾರ್ಗಗಳ ಬ್ರೇಕರ್ ಮತ್ತು ಸಿ.ಟಿ. ಬದಲಾವಣೆ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ, ಈ ಎಲ್ಲ ಫೀಡರ್‌ಗಳಾದ ಎಫ್-1 ಮದ್ದೂರು, ಎಫ್-2 ಎಚ್.ಕೆ.ವಿ.ನಗರ, ಎಫ್-3 ವಿವೇಕಾನಂದನಗರ (ಮದ್ದೂರು ಟೌನ್), ಎಫ್-6 ಬೆಸಗರಹಳ್ಳಿ, ಎಫ್-7 ಕೆ.ಐ.ಎ.ಡಿ.ಬಿ., ಎಫ್-8 ಸಿ.ಎ.ಕೆರೆ, ಎಫ್-9 ಕ್ಯಾತಘಟ್ಟ, ಎಫ್-10 ಮಠದದೊಡ್ಡಿ, ಎಫ್-11 ಕ್ಲೀನ್ ಪ್ಯಾಕ್ಸ್, ಎಫ್-12 ಛತ್ರದಹೊಸಹಳ್ಳಿ, ಎಫ್-13 ವಳಗೆರೆಹಳ್ಳಿ, ಎಫ್-14 ಸಾದೊಳಲು ಐಪಿ, ಎಫ್-15 ಗುರುದೇವಹಳ್ಳಿ ಎನ್.ಜೆ.ವೈ. ಮತ್ತು ಎಫ್-16 ಬಸವನಪುರ ಮತ್ತು ಎಫ್-17 ಮನ್ ಮುಲ್ ಡೈರಿ, ಈ ಫೀಡರ್‌ಗಳ ಗ್ರಾಮ ಪಂಚಾಯಿತಿಗಳಾದ ಸಿ.ಎ.ಕೆರೆ, ಕ್ಯಾತಘಟ್ಟ, ನಗರಕೆರೆ, ಗೊರವನಹಳ್ಳಿ, ಗೆಜ್ಜಲಗೆರೆ, ಸಾದೊಳಲು, ವಳಗೆರೆಹಳ್ಳಿ ಮತ್ತು ಚಾಮನಹಳ್ಳಿ ವ್ಯಾಪ್ತಿಗಳಲ್ಲಿ ಜ.8ರಂದು ಬೆಳಗ್ಗೆ 9ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net