

ಕೆ.ಆರ್.ಪೇಟೆ: ತ್ರೈಮಾಸಿಕ ಕಾರ್ಯನಿರ್ವಹಣೆ ಹಿನ್ನೆಲೆಯಲ್ಲಿ ಜ.18ರಿಂದ ಫೆ.12ರವರೆಗೆ ತಾಲೂಕಿನ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ.
18ರಂದು ಕೆ.ಆರ್.ಪೇಟೆ, ಅಕ್ಕಿಹೆಬ್ಬಾಳು, ಕಿಕ್ಕೇರಿ, ಆನೆಗೊಳ, 19ರಂದು ಶೀಳನೆರೆ, ಬೂಕನಕೆರೆ, ಗಂಜಿಗೆರೆ, 20ರಂದು ಹರಿಯಲದಮ್ಮ ದೇವಸ್ಥಾನ, 23ರಂದು ಕೃಷ್ಣಾಪುರ, ಸಂತೆಬಾಚಹಳ್ಳಿ, ಫೆ.8ರಂದು ಉಯ್ಗೋನಹಳ್ಳಿ, ಫೆ.12ರಂದು ಮಂದಗೆರೆ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯಲ್ಲಿ ಬೆಳಗ್ಗೆ 10ಗಂಟೆಯಿಂದ ಸಂಜೆ 6ರವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಸೆಸ್ಕ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿ.ಪುಟ್ಟಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.