

ಬೆಂಗಳೂರು: ತುರ್ತು ನಿರ್ವಹಣಾ ಕೆಲಸ ನಿರ್ವಹಿಸುವ ಹಿನ್ನೆಲೆ ಗುರುವಾರ (ಜು.25) ನಗರದ ಹಲವೆಡೆ ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಇಂದಿರಾನಗರ 1ನೇ ಹಂತ, ಎಚ್ಎಎಲ್ 2ನೇ ಹಂತ, ಹಲಸೂರು, ಹಳೆ ಮದ್ರಾಸ್ ರಸ್ತೆ, ಬೆನ್ನಿಗಾನಹಳ್ಳಿ, ಬೈರಸಂದ್ರ, ಸದಾನಂದನಗರ, ಕಸ್ತೂರಿನಗರ, ಭುವನೇಶ್ವರಿ ನಗರ, ನಾಗವಾರಪಾಳ್ಯ, ಹಲಸೂರು ರಸ್ತೆ, ಡಿಫೆನ್ಸ್ ಕಾಲನಿ, ಇಂದಿರಾನಗರ ಕ್ಲಬ್ ಸೇರಿ 50ಕ್ಕೂ ಅಧಿಕ ಕಡೆಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.