ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

s_636777717725693583_Power_Cut
Published on

ಪಿರಿಯಾಪಟ್ಟಣ: ತಾಲೂಕಿನ ಬೈಲುಕುಪ್ಪೆಯ 66 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಿಂದ ಕುಶಾಲನಗರ ಪಿರಿಯಾಪಟ್ಟಣ 66 ಕೆ.ವಿ. ವಿದ್ಯುತ್ ವಿತರಣಾ ಮಾರ್ಗಕ್ಕೆ ಹೆಚ್ಚುವರಿ 66 ಕೆ.ವಿ. ವಿದ್ಯುತ್ ವಿತರಣಾ ಲೈನ್ ಅಳವಡಿಸುವ ನಿಮಿತ್ತ ಜೂ. 25ರಿಂದ ಜು.9ರವರೆಗೆ 8 ದಿನಗಳ ಕಾಲ ದಿನ ಬಿಟ್ಟು ದಿನ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ಈ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಗೆ ಬರುವ ಬೈಲಕುಪ್ಪೆ, ಕೊಪ್ಪ, ಚನ್ನಕಲ್, ನವಿಲೂರು, ಹುಣಸವಾಡಿ, ಆವರ್ತಿ, ಪೂನಾಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳು ಮತ್ತು ಟಿಬೆಟಿಯನ್ ಕ್ಯಾಂಪ್ ವ್ಯಾಪ್ತಿಗೆ ಬರುವ ಎಲ್ಲ ಗ್ರಾಮಗಳಲ್ಲಿ ಜೂ. 25, 27, 29, ಜು 1, 3, 5, 7, ಮತ್ತು 9 ರಂದು ಬೆಳಗ್ಗೆ 9ರಿಂದ ಸಂಜೆ 5 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಎಇಇ ಗುರು ಬಸವರಾಜಸ್ವಾಮಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net