ಬಡತನದ ನಡುವೆ ಉನ್ನತ ಸಾಧನೆ

ಕಾನಹೊಸಹಳ್ಳಿ ಸಮೀಪದ ಹುಲಿಕೆರೆಯಲ್ಲಿ ಗ್ರಾಪಂ ಉಪಾಧ್ಯಕ್ಷ ದುರುಗಪ್ಪ ಮನೆಯಲ್ಲಿ ಏರ್ಪಡಿಸಿದ್ದ ಮನೆ ಮನೆಗೆ ಅಂಬೇಡ್ಕರ್ ಕಾರ್ಯಕ್ರಮದಲ್ಲಿ ದುರಗಪ್ಪ ಮತ್ತು ಮಾಲತಿ ದಂಪತಿಗೆ ಸಂವಿಧಾನ ಪೀಠಿಕೆ ನೀಡಲಾಯಿತು. ಪ್ರಾಚಾರ್ಯ ನಾಗಲಿಂಗಪ್ಪ, ಪ್ರಮುಖರಾದ ಎಳನೀರು ಗಂಗಣ್ಣ, ಡಾ.ಓಂಕಾರಪ್ಪ, ಶಿಕ್ಷಕ ಮಹಾಂತೇಶ್, ದುರುಗೇಶ ಇದ್ದರು.

Published on

ಕಾನಹೊಸಹಳ್ಳಿ: ಡಾ.ಬಿ.ಆರ್.ಅಂಬೇಡ್ಕರ್ ಅವರು ತತ್ವ ಆದರ್ಶಗಳನ್ನು ಅಳವಡಿಸಿಕೊಂಡು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವುದು ಪಾಲಕರ ಜವಾಬ್ದಾರಿ ಎಂದು ಕಾನಮಡುಗು ಸಿದ್ಧಲಿಂಗೇಶ್ವರ ಕಾಲೇಜಿನ ಪ್ರಾಚಾರ್ಯ ನಾಗಲಿಂಗಪ್ಪ ತಿಳಿಸಿದರು.

ಹುಲಿಕೆರೆಯಲ್ಲಿ ಬಹುಜನ ಸಂಘರ್ಷ ಸಮಿತಿಯಿಂದ ಆಯೋಜಿಸಿದ್ದ ಮನೆ ಮನೆಗೆ ಅಂಬೇಡ್ಕರ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಡತನ, ಅವಮಾನ ಸೇರಿ ನಾನಾ ಸಮಸ್ಯೆಗಳಲ್ಲೇ ದೇಶ, ವಿದೇಶಗಳಲ್ಲಿ ಉನ್ನತ ಶಿಕ್ಷಣ ಪಡೆದ ಅಂಬೇಡ್ಕರ್ ಸಂವಿಧಾನ ರಚಿಸಿದ್ದಾರೆ. ಸಂವಿಧಾನದ ಮೂಲಕ ಧ್ವನಿ ಇಲ್ಲದವರಿಗೆ ಧ್ವನಿಯಾಗಿದ್ದು, ಬಡವರು, ದಲಿತರು, ಮಹಿಳೆಯರು, ಕಾರ್ಮಿಕರಿಗೆ ನ್ಯಾಯ ದೊರಕಿಸಿಕೊಟ್ಟಿದ್ದಾರೆ ಎಂದರು.

ಕಾನಹೊಸಹಳ್ಳಿ ಸೋಫಿಯಾ ಶಾಲೆಯ ಶಿಕ್ಷಕ ತುಮಕರ‌್ಲಹಳ್ಳಿ ಬಿ.ಸಿದ್ದಪ್ಪ, ವಾಲ್ಮೀಕಿ ಸಮುದಾಯದ ಮುಖಂಡ ಡಾ.ಹುಲಿಕೆರೆ ಓಂಕಾರಪ್ಪ, ಶಿಕ್ಷಕ ಕೆಂಚಮಲ್ಲನಹಳ್ಳಿ ಮಹಾಂತೇಶ್, ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಎಳನೀರು ಗಂಗಾಧರ, ಗ್ರಾಪಂ ಉಪಾಧ್ಯಕ್ಷ ದುರುಗೇಶ್, ಗ್ರಾಪಂ ಮಾಜಿ ಅಧ್ಯಕ್ಷ ಗುಂಡಣ್ಣ, ಗ್ರಾಪಂ ಸದಸ್ಯರಾದ ಗಿರೀಶ್, ಮಲಿಯಪ್ಪ ಪ್ರಮುಖರಾದ ನೀರಗಂಟಿ ತಿಪ್ಪೇಶ್, ವೆಂಕಟೇಶ್, ನೀರಗಂಟಿ ಸುರೇಶ್, ಮಂಜುನಾಥ, ನಾಗರಾಜ, ಕರಿಬಸಪ್ಪ, ಕೆ.ಟಿ.ತಿಪ್ಪೇಶ್, ರಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net