ವಿಧಾನಸೌಧ ಬಳಿ ಇದ್ದಕ್ಕಿದ್ದಂತೆ ಕಾಣಿಸಿದ ಗುಂಡಿ; ಡಾಂಬರು ಹಾಕಿದ್ದ ರಸ್ತೆಯೇ ಕುಸಿತ, ಸುಮಾರು 10 ಅಡಿಯಷ್ಟು ಆಳದ ಹೊಂಡ!

ಇದೇನಿದು ವಿಧಾನಸೌಧದ ಮುಂದೆ ಆಳವಾದ ಗುಂಡಿ! - youtube
Published on

ಬೆಂಗಳೂರು: ರಾಜ್ಯದ ಶಕ್ತಿಕೇಂದ್ರ ವಿಧಾನಸೌಧ ಬಳಿ ಇಂದು ಆಳವಾದ ಗುಂಡಿ ಕಾಣಿಸಿಕೊಂಡು ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ವಿಧಾನಸೌಧದ ಗೇಟ್ ನಂ.2ರ ಬಳಿ ಈ ಗುಂಡಿ ಕಂಡುಬಂದಿದೆ.

ವಿಧಾನಸೌಧದ ಎರಡನೇ ದ್ವಾರದ ಬಳಿ ಸುಮಾರು 10 ಅಡಿಯಷ್ಟು ಆಳವಾದ ಗುಂಡಿ ಕಾಣಿಸಿಕೊಂಡಿದ್ದು, ಡಾಂಬರು ಹಾಕಿದ್ದ ರಸ್ತೆಯೇ ಕುಸಿತ ಕಂಡಿದೆ. ಹೆಚ್ಚೂಕಮ್ಮಿ ಹತ್ತು ಅಡಿ ಆಳ ಹಾಗೂ ಅಗಲದ ಈ ಕಂಡು ಸಾರ್ವಜನಿಕರು ಆತಂಕಕ್ಕೆ ಒಳಗಾದರು. ವಿಧಾನಸೌಧ ಬಳಿ ಮಾಡಲಾಗಿರುವ ರಸ್ತೆಯಲ್ಲೂ ಕಳಪೆ ಕಾಮಗಾರಿ ನಡೆದಿದೆಯೇ ಎಂಬ ಅನುಮಾನವನ್ನೂ ಕೆಲವರು ವ್ಯಕ್ತಪಡಿಸಿದ್ದಾರೆ.

ಬಸ್​-ಕಾರುಗಳು ಹೆಚ್ಚಾಗಿ ಓಡಾಡುವ ಸ್ಥಳದಲ್ಲೇ ಈ ಗುಂಡಿ ಉಂಟಾಗಿದ್ದು, ಕಾರೊಂದು ಸ್ವಲ್ಪ ಅಂತರದಲ್ಲಿ ಈ ಗುಂಡಿಗೆ ಬೀಳುವ ಅಪಾಯದಿಂದ ಪಾರಾಗಿದೆ. ಗುಂಡಿ ಬಿದ್ದ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು, ಸಂಬಂಧಿತ ಅಧಿಕಾರಿಗಳು ಧಾವಿಸಿದ್ದು, ಮುಂದಿನ ಕ್ರಮಕ್ಕಾಗಿ ಕಾರ್ಯಪ್ರವೃತ್ತರಾಗುವಂತೆ ಸಂಬಂಧಿತರಿಗೆ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net