

ಕೋಟ: ಕುಂದಾಪ್ರ ಭಾಷೆ ಹಾಗೂ ಬದುಕಿನ ಸೊಗಡನ್ನು ಮುಂದಿನ ತಲೆವಾರಿಗೆ ನೀಡಲು ಪ್ರತಿಯೊಬ್ಬರು ಶ್ರಮಿಸಬೇಕಿದೆ ಎಂದು ಸಾಹಿತಿ, ಶಿಕ್ಷಕ ಕುಂದಗನ್ನಡ ಭಾಷಾ ಜ್ಞಾನಿ ನರೇಂದ್ರ ಕುವಾರ್ ಕೋಟ ಹೇಳಿದರು.
ಕೋಟ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಅಕ್ಟೋಬರ್ 10ರಂದು ಹಂದಟ್ಟು ಗೆಳೆಯರ ಬಳಗ ದಾನಗುಂದು ಸಭಾಂಗಣದಲ್ಲಿ ನಡೆಯಲಿರುವ 4ನೇ ವರ್ಷದ ಆಸಾಡಿ ಒಡ್ರ್ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಿ ವಾತನಾಡಿದರು.
ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಅಧ್ಯಕ್ಷೆ ಜ್ಯೋತಿ ಉದಯ್ ಕುವಾರ್ ಪೂಜಾರಿ, ವಕೀಲ ಟಿ.ಮಂಜುನಾಥ ಗಿಳಿಯಾರು, ಸಾವಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಣೈ, ಎಜುಕೇರ್ ಸಂಸ್ಥೆಯ ಮುಖ್ಯಸ್ಥ ಚೇತನ್ ಬಂಗೇರ, ಪಂಚವರ್ಣ ಮಹಿಳಾ ಮಂಡಲ ಅಧ್ಯಕ್ಷೆ ಲಲಿತಾ ಪೂಜಾರಿ, ಯುವಕ ಮಂಡಲ ಅಧ್ಯಕ್ಷ ಕೆ.ಮನೋಹರ್ ಪೂಜಾರಿ ಉಪಸ್ಥಿತರಿದ್ದರು.
ಮಹಿಳಾ ಮಂಡಲ ಕಾರ್ಯದರ್ಶಿ ವಸಂತಿ ಹಂದಟ್ಟು ಸ್ವಾಗತಿಸಿದರು. ಸಂಚಾಲಕಿ ಸುಜಾತ ಬಾಯರಿ ವಂದಿಸಿದರು. ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ನಿರೂಪಿಸಿದರು. ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು.