

ಕುಂದಾಪುರ: ಶ್ರೀ ಕಾಶೀ ಮಠದ 19ನೇ ಪೀಠಾಧಿಪತಿ ಶ್ರೀ ಸುಕೃತೀಂದ್ರ ತೀರ್ಥ ಸ್ವಾಮೀಜಿ 76ನೇ ಪುಣ್ಯತಿಥಿ ಆರಾಧನಾ ಮಹೋತ್ಸವ ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ನಡೆಯಿತು.
ಶ್ರೀ ವೇದವ್ಯಾಸ ದೇವರಿಗೆ 108 ಸಿಯಾಳ ಅಭಿಷೇಕ, ಪವವಾನ ಕಲಶಾಭಿಷೇಕ, ಕನಕಾಭಿಷೇಕ, ಮಹಾ ನೈವೇದ್ಯ, ಮಹಾಪೂಜೆ ನಡೆಯಿತು. ಸಂಜೆ ಸ್ವರ್ಣ ಗರುಡ ವಾಹನ ಪೂಜಾ ಸೇವೆ ನೆರವೇರಿತು. ರಾತ್ರಿ ದೇವಳದಲ್ಲಿ ಸವಾಜ ಬಾಂಧವರಿಂದ ಶ್ರೀಗಳ ಪಾದುಕಾ ಪೂಜೆ ನಡೆಯಿತು. ಬಳಿಕ ನಡೆದ ಮಹಾಸಭೆಯಲ್ಲಿ ದೇವಳ ಆಡಳಿತ ಧರ್ಮದರ್ಶಿ ದಿನೇಶ ಜಿ.ಕಾಮತ್ ಸ್ವಾಗತಿಸಿದರು. ದೇವಳದ ಕಟ್ಟಡ ನವೀಕರಣದಲ್ಲಿ ಸಹಕರಿಸಿದ ದಾನಿಗಳನ್ನು ಗೌರವಿಸಲಾಯಿತು.