ವಕ್ಫ್ ಕಾಯ್ದೆ ವಿರೋಧಿಸಿ ಪೋಸ್ಟರ್ ಪ್ರದರ್ಶನ

3
Published on

ಕಡಬ: ಕೇಂದ್ರ ಸರ್ಕಾರದ ನೂತನ ವಕ್ಫ್ ಕಾಯ್ದೆ ವಿರೋಧಿಸಿ ಕೊರುಂದೂರು ಯೂತ್ ಫ್ರೆಂಡ್ಸ್ ವತಿಯಿಂದ ಕೊರುಂದೂರಿನಲ್ಲಿ ಮೊಂಬತ್ತಿ ಹಿಡಿದು ಬಹಿರಂಗ ಪೋಸ್ಟರ್ ಪ್ರದರ್ಶನ ಮತ್ತು ನೂತನ ಇಸ್ಲಾಮಿಕ್ ವಿರೋಧಿ ವಕ್ಫ್ ಕಾಯ್ದೆ ಮಾಹಿತಿ ನೀಡಲಾಯಿತು. ಬಹು ಉಸ್ತಾದ್ ಮಹಮ್ಮದ್ ಮುಸ್ತಫಾ ಇರ್ಫಾನಿ ಮಾತನಾಡಿ, ನಮ್ಮ ಸಮುದಾಯ ಆಪತ್ತಿನಲ್ಲಿದೆ. ಸಮುದಾಯದ ಪ್ರತಿಯೊಬ್ಬ ವ್ಯಕ್ತಿಯೂ ಎಚ್ಚೆತ್ತುಕೊಳ್ಳಬೇಕಾದ ಅವಶ್ಯಕತೆ ಇದೆ. ಕೇಂದ್ರ ಸರ್ಕಾರವು ಮುಸ್ಲಿಂ ಸಮುದಾಯದ ವಕ್ಫ್ ಮಂಡಳಿಯ ಹಿಂದಿನ ನಿಯಮಗಳನ್ನು ಬದಲಾಯಿಸಿ ಮುಸ್ಲಿಂ ವಿರೋಧಿ ಕಾನೂನು ಮತ್ತು ನಿಯಮಗಳನ್ನು ಜಾರಿಗೆ ತರಲು ಹೊರಟಿದೆ. ನೂತನ ವಕ್ಫ್ ಕಾಯ್ದೆಯನ್ನು ವಿರೋಧಿಸಲು ಮತ್ತು ಜಾರಿಗೆ ಬರದಂತೆ ತಡೆಯಲು ಮುಸ್ಲಿಂ ಸಮುದಾಯ ಸಿದ್ಧವಾಗಿ ನಿಂತಿದೆ ಎಂದರು.

ಯೂತ್ ಫ್ರೆಂಡ್ಸ್ ನಾಯಕರಾದ ಜಮಾಲ್, ಸಿದ್ದೀಕ್ ಕೊರುಂದೂರು, ಅಫ್ನಾನ್, ಬಶೀರ್ ಕೊರುಂದೂರು, ಸುಹೈಲ್ , ಅಬೂಬಕ್ಕರ್, ಇಸ್ಮಾಯಿಲ್, ಮುಹಮ್ಮದ್, ನಝೀರ್, ಮುಹಮ್ಮದ್ ಅಲಿ, ಕಬೀರ್, ಶಫಿಯುಲ್ಲಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net