ಮಕ್ಕಳಲ್ಲಿ ಆತ್ಮಸ್ಥೈರ್ಯ, ಸಕಾರಾತ್ಮಕ ಚಿಂತನೆ : ರಘುರಾಜ್ ಉಬರಡ್ಕ ಸಲಹೆ

New Project (3)
Published on

ಉಪ್ಪಿನಂಗಡಿ: ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ಪಾಸಿಟಿವ್ ಪೇರೆಂಟಿಂಗ್ ಕಾರ್ಯಾಗಾರ ಮಂಗಳವಾರ ಆಯೋಜಿಸಲಾಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಶೈಕ್ಷಣಿಕ ಪರಿವೀಕ್ಷಕ ರಘುರಾಜ್ ಉಬರಡ್ಕ ಮಾತನಾಡಿ, ಪಾಲಕರು ಮಕ್ಕಳಿಗೆ ಚಿಕ್ಕಂದಿನಿಂದಲೇ ಆತ್ಮಸ್ಥೈರ್ಯ, ಸಕಾರಾತ್ಮಕ ಚಿಂತನೆ, ನಿರ್ದಿಷ್ಟ ಗುರಿ ಇತ್ಯಾದಿ ವಾಸ್ತವಾಂಶಗಳನ್ನು ಮನದಟ್ಟು ಮಾಡಬೇಕು. ಅವರೊಡನೆ ಸ್ನೇಹಿತರಂತೆ ಬೆರೆತು ಅವರ ಆಲೋಚನೆ, ಅಭಿಪ್ರಾಯಗಳಿಗೆ ಮನ್ನಣೆ ನೀಡಬೇಕು ಎಂದು ತಿಳಿಸಿದರು.

ವಿದ್ಯಾಲಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಅಳವಡಿಸಿಕೊಳ್ಳಲಿರುವ ಸ್ಟೆಮ್ ಎಜುಕೇಶನ್ ಸಿಸ್ಟಮ್ ಕುರಿತು ಡಾ.ಬಿ ಕೃಷ್ಣ ಪ್ರಭು ಹಾಗೂ ರಂಗ ಶಿಕ್ಷಣದ ಕುರಿತು ಸಂಸ್ಥೆಯ ಚಿತ್ರಕಲಾ ಶಿಕ್ಷಕ ಪ್ರವೀಣ್ ವರ್ಣಕುಟೀರ ಮಾಹಿತಿ ನೀಡಿದರು. ಸಂಸ್ಥೆಯ ಸಂಚಾಲಕ, ಸುಬ್ರಹ್ಮಣ್ಯ ಭಟ್ ಕೆದಿಲ ಪಾಲಕರ ಸಹಕಾರ ಕೋರಿದರು.

ಸಂಸ್ಥೆಯ ಮುಖ್ಯಶಿಕ್ಷಕಿ ವೀಣಾ ಆರ್.ಪ್ರಸಾದ್ ಸ್ವಾಗತಿಸಿದರು. ಸಂಸ್ಥೆಯ ಅಧ್ಯಕ್ಷ ಕರುಣಾಕರ ಸುವರ್ಣ, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಸಹಶಿಕ್ಷಕಿಯರಾದ ರೇಣುಕಾ, ಯಶಾ ಕುಮಾರಿ ವಂದಿಸಿದರು. ಭವ್ಯ ಪಿ.ಎಸ್, ಶೀಲಾ ಹರೀಶ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net