ನಿಯಮಿತ ತಪಾಸಣೆಯಿಂದ ಆರೋಗ್ಯ ರಕ್ಷಣೆ : ಡಾ.ರಮ್ಯಾ ಹೇಳಿಕೆ

New Project (6)
Published on

ಮೂಲ್ಕಿ: ನಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷೃ ಸಲ್ಲದು. ನಿಯಮಿತ ತಪಾಸಣೆ ಹಾಗೂ ಸೂಕ್ತ ವೈದ್ಯಕೀಯ ಉಪಚಾರದಿಂದ ಪ್ರಾಣಾಪಾಯ ತಪ್ಪಿಸಲು ಸಾಧ್ಯ ಎಂದು ಮಂಗಳೂರಿನ ವೈದ್ಯೆ ಡಾ.ರಮ್ಯಾ ಹೇಳಿದರು.

ಕೆರೆಕಾಡು ಬೆಳ್ಳಾಯರು ಶ್ರೀ ಸ್ವಾಮಿ ಕೊರಗಜ್ಜ ಸಭಾಭವನದಲ್ಲಿ ಮಂಗಳೂರಿನ ನ್ಯಾಷನಲ್ ಮೆಡಿಕೋಸ್ ಆರ್ಗನೈಸೇಶನ್, ಮೂಲ್ಕಿ ತಾಲೂಕಿನ ಸೇವಾ ವಿಭಾಗ, ಕೆರೆಕಾಡು ಗ್ರಾಮ ವಿಕಾಸ ಸಮಿತಿ, ಬೆಳ್ಳಾಯರು ಕೆಟಿಎಂ ಫ್ರೆಂಡ್ಸ್ ವತಿಯಿಂದ ಆಯೋಜಿಸಲಾಗಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಕೆವ್ರಾಲ್‌ನ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಮಾರ್ಗರೇಟ್ ಸುದರ್ಶಿನಿ ಆರೋಗ್ಯದ ಬಗ್ಗೆ ವಿಶೇಷ ಮಾಹಿತಿ ನೀಡಿದರು. ಸಾತ್ವಿಕ್ ಮಂಗಳೂರು, ಸಮುದಾಯ ಆರೋಗ್ಯ ಅಧಿಕಾರಿ ಕೋಮಲ, ಆಶಾ ಕಾರ್ಯಕರ್ತೆ ವನಜಾ, ಗ್ರಾಮ ವಿಕಾಸ ಸಮಿತಿಯ ಮಾಧವ ಶೆಟ್ಟಿಗಾರ್, ಕೆಟಿಎಂ ಫ್ರೆಂಡ್ಸ್‌ನ ರಮೇಶ್ ಮತ್ತಿತರರು ಉಪಸ್ಥಿತರಿದ್ದರು. ಸತೀಶ್ ಸ್ವಾಗತಿಸಿದರು. ಯತೀಶ್ ವಂದಿಸಿದರು. ಹರ್ಷ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net