ಪಾಸಿಟಿವ್- ನೆಗೆಟಿವ್‌... ಆಸ್ಪತ್ರೆಗೇ ಡೌಟು- ಸಂತ್ರಸ್ತನ ಪಾಡು ಯಾರಿಗೂ ಬೇಡ!

Corona
Published on

ಧಾರವಾಡ: ಕರೊನಾ ಸೋಂಕಿನ ಲಕ್ಷಣಗಳು ಇಲ್ಲದಿದ್ದರೂ ಪಾಸಿಟಿವ್‌ ಪತ್ತೆಯಾಗುವುದು ಈಗೇನು ಹೊಸ ವಿಷಯವಾಗಿ ಉಳಿದಿಲ್ಲ.

ಅದರೆ ಧಾರವಾಡದಲ್ಲಿ ಕರೊನಾ ಶಂಕಿತನೊಬ್ಬನಿಗೆ ನೆಗೆಟಿವ್‌ನೋ, ಪಾಸಿಟಿವ್‌ನೋ ತಿಳಿಯದೇ, ಆಸ್ಪತ್ರೆ ಮಾಡಿರುವ ಎಡವಟ್ಟಿನಿಂದ ವ್ಯಕ್ತಿಯ ಗೋಳು ಮಾತ್ರ ಹೇಳತೀರದಾಗಿದೆ.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಧಾರವಾಡದ ಡಿಪೋದಲ್ಲಿ ಕಂಡಕ್ಟರ್‌ ಆಗಿರುವ ವ್ಯಕ್ತಿ ಕರೊನಾ ಪರೀಕ್ಷೆ ಮಾಡಿಸಿಕೊಂಡಿದ್ದಾರೆ.

ನಿಮ್ಮ ವರದಿಯಲ್ಲಿ ಪಾಸಿಟಿವ್‌ ಇದೆ, ನಿಮಗೆ ಕರೊನಾ ಸೋಂಕು ತಗುಲಿದೆ ಎಂದು ನಿನ್ನೆ ಮಧ್ಯಾಹ್ನದ ಮಧ್ಯಾಹ್ನ ಕರೆ ಮಾಡಿದ್ದ ಆರೋಗ್ಯ ಇಲಾಖೆ, ಇವರ ಮನೆ ಬಳಿ ಸಿಬ್ಬಂದಿ ಕಳುಹಿಸಿ ಕರೆತರುವಂತೆ ಹೇಳಿತ್ತು. ಆದರೆ ಸಂಜೆ ಹೊತ್ತಿಗೆ ಸೋಂಕು ಇಲ್ಲ ಎಂದು ಸಂದೇಶವನ್ನಷ್ಟೇ ಕಳುಹಿಸಿದೆ.

ತಮಗೆ ಸೋಂಕು ಇಲ್ಲ ಎಂದು ಕಂಡಕ್ಟರ್‌ ಏನೋ ಖುಷಿಪಟ್ಟುಕೊಂಡಿದ್ದಾರೆ. ಆದರೆ ಆಸ್ಪತ್ರೆಯ ಗೊಂದಲಿಂದ ಸುತ್ತಮುತ್ತಲಿನ ಜನರು ಅವರನ್ನು ಅನುಮಾನದಿಂದ ನೋಡುವಂತಾಗಿದೆ.

ಹೆಬ್ಬಳ್ಳಿ ಅಗಸಿಯಲ್ಲಿ ಸ್ನೇಹಿತರೊಬ್ಬರೊಂದಿಗೆ ಹೋಂ ಕ್ವಾರಂಟೈನ್ ಆಗಿರುವ ಇವರಿಗೆ ಸೋಂಕು ದೃಢಪಟ್ಟಿದೆ ಎಂದು ಇದೇ 17ರಂದು ಆರೋಗ್ಯ ಇಲಾಖೆ ಅಧಿಕಾರಿಗಳು ಕರೆ ಮಾಡಿ ವಿಷಯ ತಿಳಿದ್ದರು. ಮನೆ ಹತ್ತಿರ ಸಿಬ್ಬಂದಿ ಕಳುಹಿಸಿ ಆಂಬ್ಯುಲೆನ್ಸ್‌ಗಾಗಿ ಕಾಯುವಂತೆ ನಿರ್ದೇಶಿಸಿದ್ದರು. ಇವರು ಕಾಯುತ್ತಿರುವಾಗಲೇ ಸಂಜೆ ನಿಮಗೆ ಸೋಂಕು ಇಲ್ಲ, ನೆಗೆಟಿವ್‌ ಬಂದಿದೆ ಎಂದು ಸಂದೇಶ ಕಳುಹಿಸಿದ್ದಾರೆ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net