ಕಳಪೆ ಕಾಮಗಾರಿ ಭ್ರಷ್ಟತೆ ಸಂಕೇತ

29 KAMPLI 01
ಕಂಪ್ಲಿಯಲ್ಲಿ ಹಮ್ಮಿಕೊಂಡಿದ್ದ ಭ್ರಷ್ಟಾಚಾರ ವಿರುದ್ಧ ಅರಿವು ಸಪ್ತಾಹ ಕಾರ್ಯಕ್ರಮದಲ್ಲಿ ಬಳ್ಳಾರಿ ಲೋಕಾಯುಕ್ತ ಎಸ್ಪಿ ಸಿ.ಸಿದ್ದರಾಜು ಮಾತನಾಡಿದರು. ಪ್ರಮುಖರಾದ ಎಸ್.ಶಿವರಾಜ, ಆರ್.ವಸಂತಕುಮಾರ್, ಆರ್.ಕೆ.ಶ್ರೀಕುಮಾರ್, ಸಂಗಮೇಶ, ಮಹಮ್ಮದ್ ರಫಿ ಇತರರಿದ್ದರು.
Published on

ಕಂಪ್ಲಿ: ಪ್ರಾಮಾಣಿಕತೆಯಿಂದ ಮಾತ್ರ ಭ್ರಷ್ಟತೆ ತೊಲಗಿಸಲು ಸಾಧ್ಯ ಎಂದು ಬಳ್ಳಾರಿ ಲೋಕಾಯುಕ್ತ ಎಸ್ಪಿ ಸಿ.ಸಿದ್ದರಾಜು ಹೇಳಿದರು.

ಸರ್ಕಾರಿ ಡಿಗ್ರಿ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ಲೋಕಾಯುಕ್ತ ಹಮ್ಮಿಕೊಂಡಿದ್ದ ಭ್ರಷ್ಟಾಚಾರ ವಿರುದ್ಧ ಅರಿವು ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ಲಂಚ ಪಡೆಯುವುದು ಅಷ್ಟೇಲ್ಲ, ಕೊಡುವುದು ಕೂಡ ಅಪರಾಧ. ಸಾರ್ವಜನಿಕರು ಪ್ರಾಮಾಣಿಕರಾದಲ್ಲಿ ಮಾತ್ರ ಭ್ರಷ್ಟತೆ ತಡೆಯಲು ಸಾಧ್ಯ.

ಸತ್ಯ ನಿಷ್ಠೆ ಸಂಸ್ಕೃತಿ ನಮ್ಮಿಂದಲೇ ಆರಂಭಗೊಳ್ಳಬೇಕಿದೆ. ಸಭಾಂಗಣದ ಛಾವಣಿ ಸಿಮೆಂಟ್ ಪದರು ಬೀಳುವುದು ಸಾರ್ವಜನಿಕರಿಗೆ ತೊರಿಸುತ್ತ ಇದು ಕಳಪೆ ಕಾಮಗಾರಿ ಭ್ರಷ್ಟತೆ ಸಂಕೇತ. ಇದನ್ನು ತೊಲಗಿಸಲು ಸಾರ್ವಜನಿಕರು ಕೈಜೋಡಿಸಬೇಕು ಎಂದರು.

ತಾಪಂ ಇಒ ಆರ್.ಕೆ.ಶ್ರೀಕುಮಾರ್ ಮಾತನಾಡಿ, ಕಾನೂನಿನ ಅರಿವಿನ ಕೊರತೆ ಭ್ರಷ್ಟಾಚಾರಕ್ಕೆ ಕಾರಣವಾಗಿದೆ. ಹಣ ಕೊಡದೆ ಸೇವೆ ಪಡೆದುಕೊಳ್ಳುವುದಾಗಿ ಸಾರ್ವಜನಿಕರು, ಹಣ ಪಡೆಯದೆ ಸೇವೆ ಸಲ್ಲಿಸುವ ಪ್ರತಿಜ್ಞೆಯನ್ನು ಅಧಿಕಾರಿಗಳು ಸ್ವೀಕರಿಸಬೇಕಿದೆ ಎಂದರು.

ತಹಸೀಲ್ದಾರ್ ಎಸ್.ಶಿವರಾಜ, ಲೋಕಾಯುಕ್ತ ಡಿವೈಎಸ್ಪಿ ಪಿ.ಆರ್.ವಸಂತಕುಮಾರ್, ಲೋಕಾಯುಕ್ತ ನಿರೀಕ್ಷಕರಾದ ಸಂಗಮೇಶ, ಮಹಮ್ಮದ್ ರಫಿ, ನರೇಗಾ ಎಡಿ ಕೆ.ಎಸ್.ಮಲ್ಲನಗೌಡ, ಪ್ರಾಚಾರ್ಯ ಕೆ.ಚಂದ್ರಶೇಖರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net