

ರಾಜ್ಯದಲ್ಲೂ ಕರೊನಾ ಸೋಂಕಿತರ ಪಟ್ಟಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಆದರೆ ರೋಗಿಗಳು ಹೆಚ್ಚಿದಂತೆ ಅವರಿಗೆ ಸಿಗುವ ಸವಲತ್ತುಗಳಲ್ಲಿ ವ್ಯತ್ಯಯವಾಗುತ್ತಿದೆ. ಕೋವಿಡ್ ಕೇರ್ ಸೆಂಟರ್ಗಳು ಅವ್ಯವಸ್ಥೆಯ ಆಗರಗಳಾಗುತ್ತಿದ್ದು, ಸ್ವಚ್ಛತೆ ಮರೀಚಿಕೆಯಾಗಿದೆ. ರೋಗಿಗಳಿಗೆ ಗುಣಮಟ್ಟದ ಆಹಾರ ಸಿಗುತ್ತಿಲ್ಲ. ವೆಂಟಿಲೇಟರ್, ಆಕ್ಸಿಜನ್, ಹಾಸಿಗೆ ಕೊರತೆ ಸಾಮಾನ್ಯ ಎನ್ನುವಂತಾಗಿದ್ದು, ಕೆಲವೆಡೆ ಸೋಂಕಿತರ ಸುಲಿಗೆಯೂ ನಡೆಯುತ್ತಿದೆ. ಇನ್ನೂ ಕೆಲವೆಡೆ ನೆಪಮಾತ್ರಕ್ಕೆ ಚಿಕಿತ್ಸೆ ನೀಡಲಾಗುತ್ತಿದ್ದು, ಕರೊನಾ ಹೆಸರಲ್ಲಿ ಲೂಟಿ ನಡೆಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ವಿಜಯವಾಣಿ ರಿಯಾಲಿಟಿ ಚೆಕ್ ನಡೆಸಿ ವಾಸ್ತವ ಬಿಚ್ಚಿಡುವ ಪ್ರಯತ್ನ ನಡೆಸಿದ್ದು, ಯಾವ ಜಿಲ್ಲೆಯಲ್ಲಿ ಏನು ಪರಿಸ್ಥಿತಿ ಇದೆ ಎಂಬ ಸಂಕ್ಷಿಪ್ತ ಮಾಹಿತಿ ನೀಡಲಾಗಿದೆ.
ಕೆಲ ಆಸ್ಪತ್ರೆಗಳಲ್ಲಿ ವೆಂಟಿಲೇಟರ್, ಆಕ್ಸಿಜನ್ ಮತ್ತು ಹಾಸಿಗೆ ಕೊರತೆ ಖಾಸಗಿ ಆಸ್ಪತ್ರೆಗಳು ಈವರೆಗೆ ಶೇ.50 ಹಾಸಿಗೆ ಬಿಟ್ಟುಕೊಟ್ಟಿಲ್ಲ ಕೆಲ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಇತರೆ ಸಿಬ್ಬಂದಿಯಿಂದ ಹಣಕ್ಕೆ ಬೇಡಿಕೆ ಖಾಸಗಿ ಆಸ್ಪತ್ರೆಗೆ ಕಳುಹಿಸಲು ಬಿಬಿಎಂಪಿ ಸಿಬ್ಬಂದಿಯಿಂದ ಹಣ ವಸೂಲಿ
ಬಾಗಲಕೋಟೆ ರೋಗಿಗಳ ಆರೈಕೆಯಲ್ಲಿ ಕಾಳಜಿಯಿಲ್ಲ, ಕಾಟಾಚಾರಕ್ಕೆ ಚಿಕಿತ್ಸೆ ಹಾಸಿಗೆ, ಒಳಾಂಗಣದಲ್ಲಿ ಸ್ವಚ್ಛತೆ ಕೊರತೆ ಪ್ರತಿನಿತ್ಯ ಸೋಂಕಿನಿಂದ ಸಾವಿಗೀಡಾದವರ ವರದಿ ಕೊಡುತ್ತಿಲ್ಲ
ಕಲಬುರಗಿ ಜಿಮ್ಸ್ ಹಾಗೂ ಇಎಸ್ಐಸಿ ಸೂಕ್ತ ಚಿಕಿತ್ಸೆಯಿಲ್ಲ, ಬಿಸಿನೀರು ಕೊಡುತ್ತಿಲ್ಲ ವೈದ್ಯರು ಸಕಾಲಕ್ಕೆ ಬರುವುದಿಲ್ಲ, ಬಂದರೂ ಸರಿಯಾಗಿ ಸ್ಪಂದಿಸುವುದಿಲ್ಲ
ಯಾದಗಿರಿ ಸಕಾಲಕ್ಕೆ ವೈದ್ಯರ ಚಿಕಿತ್ಸೆ ಲಭ್ಯವಾಗುತ್ತಿಲ್ಲ. ಆಕ್ಸಿಜನ್ ಕೊರತೆ
ಬೀದರ್ ಬ್ರಿಮ್ಸ್ ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ 65 ವೆಂಟಿಲೇಟರ್ಗಳಿದ್ದು, ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ
ಉತ್ತರ ಕನ್ನಡ ಜಿಲ್ಲೆಯ ಸೋಂಕಿತರಿಗೆ ಉತ್ತಮ ಚಿಕಿತ್ಸೆ ಲಭ್ಯವಾಗುತ್ತಿದೆ. ಸ್ವಚ್ಛತೆ ಮತ್ತು ಸೌಕರ್ಯ ಕೊರತೆ, ಸರಿಯಾದ ಸಮಯಕ್ಕೆ ಊಟ ಸಿಗುವುದಿಲ್ಲ
ಹಾವೇರಿ ಸೋಂಕಿತರಿಗೆ ಮಾತ್ರೆ ನೀಡಿದರೆ, ಮತ್ತೆ ಯಾರೊಬ್ಬರೂ ಬರುವುದಿಲ್ಲ.
ದಾವಣಗೆರೆ ವೆಂಟಿಲೇಟರ್ಗಳ ಕೊರತೆ. ತಂತ್ರಜ್ಞರು ಇಲ್ಲ, ಸಿಬ್ಬಂದಿ ಕೊರತೆ ಕೋವಿಡ್ ಆರೈಕೆ ಕೇಂದ್ರದಲ್ಲಿ ಮೂಲ ಸೌಕರ್ಯಗಳಿಗೆ ಕೊರತೆ
ದಕ್ಷಿಣ ಕನ್ನಡ ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ಸಾಕಷ್ಟು ಹಾಸಿಗೆ ಲಭ್ಯವಿದ್ದು, ಸೂಕ್ತ ಚಿಕಿತ್ಸೆ ಲಭ್ಯವಿದೆ
ಉಡುಪಿ ಸೋಂಕಿತರ ಚಿಕಿತ್ಸೆ ಮತ್ತು ಆರೈಕೆಯಲ್ಲಿ ಸಮಸ್ಯೆ ಇಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚು ಶುಲ್ಕ ಪಡೆಯುತ್ತಿರುವ ಆರೋಪವಿದೆ.
ಚಿಕ್ಕಮಗಳೂರು ಕೋವಿಡ್ ರೋಗಿಗಳಿಗೆ ಇತರೆ ತೊಂದರೆಗಳಿದ್ದರೆ, ಚಿಕಿತ್ಸೆ ಸಿಗುತ್ತಿಲ್ಲ ಊಟ, ಉಪಾಹಾರಕ್ಕೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ
ಮೈಸೂರು ಸೂಕ್ತ ಚಿಕಿತ್ಸೆ ಲಭ್ಯವಾಗುತ್ತಿದೆ. 12 ವೆಂಟಿಲೇಟರ್ ಇವೆ ಗಂಭೀರ ಕಾಯಿಲೆಗಳ ರೋಗಿಗಳ ಪ್ರಾಣಕ್ಕೆ ಅಪಾಯ
ಹಾಸನ ವೆಂಟಿಲೇಟರ್ ಕೊರತೆ, 59 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂಲ ಸೌಕರ್ಯಗಳು, ಊಟಕ್ಕೆ ತೊಂದರೆಯಿಲ್ಲ
ಮಂಡ್ಯ ಕರೊನಾ ಸೋಂಕಿತರಿಗೆ ನಿತ್ಯ 2 ಬಾರಿ ವೈದ್ಯರು ತಪಾಸಣೆ ಬಿಸಿ ನೀರಿನ ಸಮಸ್ಯೆಯಿದ್ದು, ರಾತ್ರಿ ವಾರ್ಡ್ಗಳಿಗೆ ನಾಯಿಗಳು ಬರುತ್ತವೆ
ಚಾಮರಾಜನಗರ ಸರಿಯಾದ ಸಮಯಕ್ಕೆ ಊಟ ಪೂರೈಸಲ್ಲ
ಮಡಿಕೇರಿ ರಾತ್ರಿ ವೇಳೆ ವೈದ್ಯರಿರಲ್ಲ, ಸೋಂಕಿತರ ಸಮಸ್ಯೆಗೆ ತಕ್ಷಣ ಸ್ಪಂದಿಸುವುದಿಲ್ಲ
ರಾಯಚೂರು ಸ್ವಚ್ಛತೆಯಿಲ್ಲ, ಉಸಿರಾಟದ ಸಮಸ್ಯೆ ಸೋಂಕಿತರಿಗೆ ಆಕ್ಸಿಜನ್ ಸಿಗಲ್ಲ ಆಸ್ಪತ್ರೆ ಆವರಣ ಹಂದಿಗಳ ತಾಣವಾಗಿದ್ದು, ಎಲ್ಲೆಂದರಲ್ಲಿ ಪಿಪಿಇ ಕಿಟ್ ಬಿಸಾಡಲಾಗುತ್ತಿದೆ ಔಷಧವನ್ನು ಹೊರಗಿಂದ ತರುವಂತೆ ಕಳುಹಿಸುತ್ತಿದ್ದಾರೆ.
ಕೊಪ್ಪಳ ವೈದ್ಯರು ಸಕಾಲಕ್ಕೆ ಬರುವುದಿಲ್ಲ, ಕರೊನಾ ಹೊರತಾದ ರೋಗಕ್ಕೆ ಚಿಕಿತ್ಸೆ ಸಿಗುತ್ತಿಲ್ಲ ಊಟವನ್ನು ಸರಿಯಾದ ಸಮಸಯಕ್ಕೆ ನೀಡುತ್ತಿಲ್ಲ
ಬಳ್ಳಾರಿ ವೈದ್ಯರು ನಿಗಾವಹಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ವೈದ್ಯರಲ್ಲಿಯೂ ಕರೊನಾ ಸೋಂಕು ಕಾಣಿಸಿದ ಬಳಿಕ ಚಿಕಿತ್ಸೆಗೆ ತೊಂದರೆ
ಚಿತ್ರದುರ್ಗ ಕೋವಿಡ್ ನಿಗದಿತ ಅಸ್ಪತ್ರೆ ಮತ್ತು ಆರೈಕೆ ಕೇಂದ್ರದಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಔಷಧ ಹಾಗೂ ಊಟೋಪಾಚಾರ ವ್ಯವಸ್ಥೆ ಸರಿಯಿಲ್ಲ. ವೈದ್ಯರು ಸಕಾಲಕ್ಕೆ ಬರುವುದಿಲ್ಲ ಕೋವಿಡ್ ಆಸ್ಪತ್ರೆಯಲ್ಲಿ 20 ವೆಂಟಿಲೇಟರ್ಗಳಿದ್ದರೂ ತಜ್ಞರಿಲ್ಲದೆ ಸದ್ಬಳಕೆ ಆಗುತ್ತಿಲ್ಲ.
ಬೆಳಗಾವಿ ಸೋಂಕಿತರಿಗೆ ಆಕ್ಸಿಜನ್, ಆಹಾರ ಕೊರತೆ, ಇತರೆ ಕಾಯಿಲೆಗಳಿಗೆ ಚಿಕಿತ್ಸೆ ಸಿಗುತ್ತಿಲ್ಲ ಆಸ್ಪತ್ರೆಗಳಲ್ಲಿ ಸೋಂಕಿತರನ್ನು ವೈದ್ಯಕೀಯ ಸಿಬ್ಬಂದಿ ಅತಿ ಕೀಳಾಗಿ ಕಾಣುತ್ತಾರೆ.
ಕೋಲಾರ ಜಿಲ್ಲೆಯ ಕೋವಿಡ್ ಆಸ್ಪತ್ರೆಗಳಲ್ಲಿ ತಪಾಸಣೆಗೆ ವೈದ್ಯರು ಬರುತ್ತಿಲ್ಲ. ಬಿಸಿ ನೀರಿನ ಕೊರತೆ, ಇಕ್ಕಟ್ಟಾದ ಜಾಗದಿಂದಾಗಿ ಸಾಮಾಜಿಕ ಅಂತರ ಸಮಸ್ಯೆ
ರಾಮನಗರ ಜಿಲ್ಲೆಯ ಕೋವಿಡ್ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ ಸರಿಯಾದ ಊಟ, ಬಿಸಿನೀರಿನ ಲಭ್ಯತೆ ಕೊರತೆ
ತುಮಕೂರು ಜಿಲ್ಲೆಯ ಕೋವಿಡ್ ಆರೈಕೆ ಕೆಂದ್ರದಲ್ಲಿ ಸ್ವಚ್ಛತೆ ಮರೀಚಿಕೆ ಸೋಂಕಿತರ ಚಿಕಿತ್ಸೆಗೆ ನಿಯಮಿತ ವೈದ್ಯರ ಭೇಟಿ ಇಲ್ಲ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕರೊನಾ ಚಿಕಿತ್ಸೆಗೆ ಸಂಬಂಧಿಸಿದಂತೆ ಯಾವುದೇ ದೂರುಗಳು ಕೇಳಿ ಬರುತ್ತಿಲ್ಲ. ರೋಗ ಲಕ್ಷಣಗಳು ಇಲ್ಲದವರಿಗೆ ಮನೆಯಲ್ಲಿಯೇ ಚಿಕಿತ್ಸೆಯ ವ್ಯವಸ್ಥೆ ಒದಗಿಸಲಾಗಿದೆ.
ಶಿವಮೊಗ್ಗ ಶಿವಮೊಗ್ಗದ ಮೆಗ್ಗಾನ್ನ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ ಲಭ್ಯ ರೋಗಿಗಳ ಚಿಕಿತ್ಸೆಗೆ ಮೂರು ಪಾಳಿಯಲ್ಲಿ ವೈದ್ಯರ ಕಾರ್ಯ. ಬಿಸಿ ನೀರಿಗೆ ಸಮಸ್ಯೆ
ಧಾರವಾಡ ಹುಬ್ಬಳ್ಳಿ ಕಿಮ್ಸ್ನಲ್ಲಿ ಸೋಂಕಿತರಿಗೆ ಉತ್ತಮ ಚಿಕಿತ್ಸೆ ಲಭ್ಯ. ರಾಜ್ಯದ ಮೊದಲ ಪ್ಲಾಸ್ಮಾ ಚಿಕಿತ್ಸೆ
ವಿಜಯಪುರ ಕೋವಿಡ್ ಸೊಂಕಿತರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ, ಔಷಧ ಕೊಡಲು ವಿಳಂಬ ಗುಣಮಟ್ಟದ ಊಟವಿಲ್ಲ, ಮಧ್ಯಾಹ್ನ 3 ರೊಟ್ಟಿ ಕೊಡುತ್ತಾರೆ, ಪಲ್ಯಾ ಸಿಗಲ್ಲ ಆಸ್ಪತ್ರೆ ವಾರ್ಡ್ ಗಳು ಹಾಗೂ ಶೌಚಗೃಹ ಸ್ವಚ್ಛತೆ ಕೊರತೆ