ಪೊನ್ನುಕಂಡ ತಂಡ ಚಾಂಪಿಯನ್

ಪೊನ್ನುಕಂಡ ತಂಡ ಚಾಂಪಿಯನ್
Published on

ನಾಪೋಕ್ಲು: ಕೊಡಗು ಜಿಲ್ಲಾ ಗೊಲ್ಲ ಸಮಾಜದ ವತಿಯಿಂದ ನಾಪೋಕ್ಲು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಗುರುವಾರ ಮತ್ತು ಶುಕ್ರವಾರ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟದ ಕ್ರಿಕೆಟ್ ಪಂದ್ಯದಲ್ಲಿ ಪೊನ್ನುಕಂಡ ತಂಡ ಪ್ರಥಮ ಸ್ಥಾನ ಗಳಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿತು.

ಪೊನ್ನಾಟಿಯಂಡ ತಂಡ ದ್ವಿತೀಯ ಸ್ಥಾನ ಗಳಿಸಿತು. ಪುರುಷರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಆಚೀರ ತಂಡ ಪ್ರಥಮ ಸ್ಥಾನ ಗಳಿಸಿದರೆ ಪೊನ್ನುಕಂಡ ತಂಡ ದ್ವಿತೀಯ ಸ್ಥಾನ ಗಳಿಸಿತು. ಮಹಿಳೆಯರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಪೊಂಗೇರ ತಂಡ ಪ್ರಥಮ, ಕೈಬ್ಲಿರ ತಂಡ ದ್ವಿತೀಯ ಸ್ಥಾನ ಗಳಿಸಿತು.

ಕೊಡಗು ಜಿಲ್ಲಾ ಗೊಲ್ಲ ಸಮಾಜದ ಅಧ್ಯಕ್ಷ ಅರೆಯಂಡ ಎ.ಭೀಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಕೊಡವ ಭಾಷಿಕ ಒಕ್ಕೂಟದ ಅಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ ಉದ್ಘಾಟಿಸಿ ಮಾತನಾಡಿ, ಗೊಲ್ಲ ಸಮುದಾಯವು ಚಿಕ್ಕ ಸಮುದಾಯವಾದರೂ ದೊಡ್ಡ ಮಟ್ಟದಲ್ಲಿ ಕ್ರೀಡಾಕೂಟ ಆಯೋಜಿಸಿ ಯಶಸ್ವಿಗೊಳಿಸಿರುವುದು ಸಂತಸ ತಂದಿದೆ. ಪ್ರತಿಯೊಬ್ಬರೂ ಒಗ್ಗಟ್ಟು, ಶಿಸ್ತು , ಪ್ರೀತಿ, ವಿಶ್ವಾಸ ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆರಕ್ಷಕ ಇಲಾಖೆಯ ನಿವೃತ್ತ ಸಹಾಯಕ ಉಪನಿರೀಕ್ಷಕ ಮುಕ್ಕಾಟಿರ ಕೆ.ಗಣೇಶ್ ಮಾದಪ್ಪ, ಅಗ್ನಿಶಾಮಕ ದಳದ ನಿವೃತ್ತ ಸಹಾಯಕ ಉಪ ನಿರೀಕ್ಷಕ ಪೊನ್ನಾಟಿಯಂಡ ಬಿ.ತಮ್ಮಯ್ಯ, ಮಾಜಿ ಸೈನಿಕ ಪೊಂಗೇರ ಪ್ರಕಾಶ್ ಚಿಣ್ಣಪ್ಪ, ಕ್ರೀಡಾ ಸಮಿತಿ ಅಧ್ಯಕ್ಷ ತೊತ್ತಿಯಂಡ ಅಜಂತ ನಾಣಯ್ಯ, ಕಾಫಿ ಬೆಳೆಗಾರ ಉದ್ದಮಾಡಟಡ ಕೆ ಕಾಶಿ ಭೀಮಯ್ಯ, ಚೋಕಿರ ವಾಸುದೇವ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net