ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ

nmt
Published on

ನ್ಯಾಮತಿ: ಮತದಾರರ ಪಟ್ಟಿ ಪರಿಷ್ಕರಣೆ, ಮತಗಟ್ಟೆ ಅಧಿಕಾರಿಗಳ ಕರ್ತವ್ಯ ನಿರ್ವಹಿಸುವ ಹಾಗೂ ಚುನಾವಣೆ ನೂತನ ಆ್ಯಪ್ ಕುರಿತು ತಾಲೂಕಿನ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನೀಡುವ ಕಾರ್ಯಕ್ರಮಕ್ಕೆ ತಹಸೀಲ್ದಾರ್ ಆರ್.ವಿ. ಕಟ್ಟಿ ಶುಕ್ರವಾರ ಚಾಲನೆ ನೀಡಿದರು.

ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ನಡೆದ ಬೆಂಗಳೂರು ಮುಖ್ಯ ಚುನಾವಣೆ ಕಚೇರಿಯಿಂದ ವಿಡಿಯೋ ಸಂವಾದದ ಮೂಲಕ ನೀಡುವ ತರಬೇತಿ ಕಾರ್ಯಕ್ರಮಕ್ಕೆ ತಾಲೂಕಿನ ಎಲ್ಲ್ಲ ಮತಗಟ್ಟೆ ಅಧಿಕಾರಿಗಳು ಭಾಗವಹಿಸಿ ತರಬೇತಿ ಪಡೆದರು.

ಕಾರ್ಯಕ್ರಮದಲ್ಲಿ ಗೇಡ್ 2 ತಹಸೀಲ್ದಾರ್ ಗೋವಿಂದಪ್ಪ ಎಚ್.ಬಿ., ಉಪ ತಹಸೀಲ್ದಾರ್ ನಂದ್ಯಪ್ಪ , ಬೆಳಗುತ್ತಿ ನಾಡ ಕಚೇರಿ ಉಪ ತಹಸೀಲ್ದಾರ್ ಸವಿತಾ ಆರ್., ಚಂದ್ರಶೇಖರ್ ಗೋವಿನಕೋವಿ, ಚಂದ್ರಶೇಖರ್ ಆರ್., ತರಬೇತುದಾರರಾದ ಪ್ರಶಾಂತ ಎಂ., ಮಲ್ಲಿಕಾರ್ಜುನ ಬಡಿಗೇರ್, ತಾಲೂಕಿನ ಆಡಳಿತಾಧಿಕಾರಿಗಳು ಮತ್ತು ಮತಗಟ್ಟೆ ಅಧಿಕಾರಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net