ಮೊಗವೀರ ಸಮುದಾಯಕ್ಕೆ ರಾಜಕೀಯ ಪ್ರಾಶಸ್ತ್ಯ ನೀಡುವಂತೆ ಆಗ್ರಹ

mogaveera
Published on

ಮಂಗಳೂರು: 1989 ರಿಂದ ಕರಾವಲಿಯ ರಾಕೀಯ ಪಕ್ಷಗಳಿಂದ ಮೊಗವೀರರ ಕಡೆಗಣನೆಯಾಗುತ್ತಿದ್ದು, ಈಬಾರಿ ನಡೆಯಲಿರು ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಕ್ಷೇತ್ರಗಳಲ್ಲಿ ಯಾವುದಾದರೊಂದು ಕ್ಷೇತ್ರದಲ್ಲಿ ಮೊಗವೀರ ಸಮಾಜದ ಸೂಕ್ತವಾದ ವ್ಯಕ್ತಿಗೆ ಶಾಸಕ ಸ್ಥಾನಕ್ಕೆ ರ್ಸ್ಪಸಲು ಅವಕಾಶ ನೀಡಬೇಕು ಎಂದು ದಕ್ಷಿಣ ಕನ್ನಡ ಮೊಗವೀರ ಸಂಯುಕ್ತ ಸಭೆ ಒತ್ತಾಯಿಸಿದೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ಭರತ್ ಕುಮಾರ್ ಉಳ್ಳಾಲ್, ದ.ಕ. ಜಿಲ್ಲೆಯಲ್ಲಿ ಮೊಗವೀರ ಸಮಾಜ ಪ್ರಭಲ ರಾಜಕೀಯ ಶಕ್ತಿ. ದ.ಕ. ಜಿಲ್ಲೆಯಲ್ಲಿ 1989ರ ಬಳಿಕ ಯಾವುದೇ ಪಕ್ಷಗಳು ನಮಗೆ ರ್ಸ್ಪಸಲು ಅವಕಾಶ ನೀಡದೆ ನಮ್ಮನ್ನು ವಂಚಿಸಿ ಅನ್ಯಾಯ ಮಾಡುತ್ತಿದೆ. ಕೇವಲ ಓಟ್ ಬ್ಯಾಂಕ್‌ಗಳಾಗಿ ಮಾಡಿರುವುದಲ್ಲದೆ ಸಾಮಾಜಿಕ ನ್ಯಾಯದಂತೆ ನಮ್ಮ ಸಮಾಜಕ್ಕೆ ಯಾವುದೇ ಅವಕಾಶ ನೀಡುತ್ತಿಲ್ಲ. ಮೊಗವೀರ ಸಮಾಜ ನಿಯತ್ತು ಮತ್ತು ಒಗ್ಗಟ್ಟಿಗೆ ಹೆಸರುವಾಸಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿಯಾದರೂ ಒಂದಾದರೂ ಶಾಸಕ ಸ್ಥಾನಕ್ಕೆ ರ್ಸ್ಪಸಲು ನಮ್ಮ ಸಮಾಜಕ್ಕೆ ಪರಿಗಣಿಸಬಹುದೆಂಬ ನಿರೀಕ್ಷೆಯಲ್ಲಿ ಇದ್ದೆವು. ಆದರೆ, ಯಾವುದೇ ಪಕ್ಷದಲ್ಲೂ ನಮ್ಮ ಸಮಾಜದ ಉಮೇದುದಾರಿಕೆ ಬಗ್ಗೆ ಚಕಾರವೆತ್ತದೆ ಇರದಿರುವುದು ಬೇಸರ ತಂದಿದೆ. ಮುಂಬರುವ ಚುನಾವಣೆ ಪ್ರಣಾಳಿಕೆಗೆ ಯಾವೆಲ್ಲಾ ಅಂಶಗಳನ್ನು ಸೇರಿಸಬಹುದು ಎಂಬ ಬಗ್ಗೆಯೂ ನಾವು ಮನವಿ ನೀಡಿದ್ದೇವೆ ಎಂದು ಹೇಳಿದರು.

ಈ ಸಂದರ್ಭ ಶ್ಯಾಮ ಸುಂದರ್ ಕುದ್ರೋಳಿ, ಮೋಹನ್ ಕೋಡಿಕಲ್, ಸುಭಾಶ್ಚಂದ್ರ ಕಾಂಚನ್, ಯಶವಂತ ಮೆಂಡನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net