ತಡರಾತ್ರಿ ಬಾಲ್ಯ ವಿವಾಹ ತಡೆದ ಪೊಲೀಸ್

Unceasing child marriage in Kodagu
Published on

ರಾಮನಗರ: ಸಹಾಯವಾಣಿಗೆ ಬಂದ ಕರೆ ಹಿನ್ನೆಲೆಯಲ್ಲಿ ನಗರದ ಕಲ್ಯಾಣ ಮಂಟಪವೊಂದರಲ್ಲಿ  ನಡೆಯುತ್ತಿದೆ ಎನ್ನಲಾದ  ಬಾಲ್ಯ ವಿವಾಹವೊಂದನ್ನು ನಗರದ ಪೊಲೀಸರು ತಡೆದಿದ್ದಾರೆ.

ಬೆಂಗಳೂರು ಮೂಲದ ಬಾಲಕಿ ಹಾಗೂ ದೊಡ್ಡಬಳ್ಳಾಪುರ ಮೂಲದ ಯುವಕನ ನಡುವೆ ಮದುವೆ ನಡೆಯುತ್ತಿತ್ತು. ಈ ಕುರಿತು, ಬಾಲ್ಯ ವಿವಾಹ ಸಹಾಯವಾಣಿ 112ಗೆ ದೂರು ಬಂದಿತ್ತು. ಕೂಡಲೇ ಸಕ್ರಿಯರಾದ ಪೊಲೀಸರು ಸ್ಥಳಕ್ಕೆ ತೆರಳಿ ಮದುವೆಯನ್ನು ತಡೆದಿದ್ದಾರೆ. ಈ ವೇಳೆ ಬಾಲಕಿಯ ಪಾಲಕರು ಆಧಾರ್ ಕಾರ್ಡ್ ಅನ್ನು ಬಾಲಕಿಯ ಜನ್ಮದಿನದ ದಾಖಲೆಯಾಗಿ ನೀಡಿದ್ದಾರೆ. ಆದರೆ ಆಧಾರ್ ಕಾರ್ಡ್ ಜನ್ಮ ದಾಖಲೆಯಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಮದುವೆಗೆ ತಡೆಯೊಡ್ಡಿದ್ದಾರೆ.

ಆಧಾರ್ ಕಾರ್ಡ್‌ನಲ್ಲಿ ಬಾಲಕಿಯ ಜನ್ಮದಿನಾಂಕ ಬದಲಿಸಿರುವ ಆರೋಪವಿದೆ. ಹಾಗಾಗಿ, ಶಾಲಾ ದಾಖಲೆಗಳನ್ನು ಸಂಗ್ರಹಿಸಿ ಜನ್ಮದಿನಾಂಕ ಪರಿಶೀಲನೆ ಮಾಡಬೇಕಿದೆ. ಸದ್ಯ ಮದುವೆಗೆ ತಡೆ ನೀಡಲಾಗಿದ್ದು, ವಧ–ವರರು ಅವರ ಮನೆಗಳಿಗೆ ತೆರಳಿದ್ದಾರೆ. ಭಾನುವಾರ ದಾಖಲೆ ಸಂಗ್ರಹಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net