ವಿದ್ಯಾರ್ಥಿಗಳಿಂದ ಪೊಲೀಸ್ ಠಾಣೆ ಭೇಟಿ

Bdk_Police station
Published on

ಬದಿಯಡ್ಕ: ಕುಂಜತ್ತೂರು ಪೀಸ್ ಕ್ರಿಯೇಟಿವ್ ಶಾಲೆ ವಿದ್ಯಾರ್ಥಿಗಳು ಮಂಜೇಶ್ವರ ಪೊಲೀಸ್ ಠಾಣೆಗೆ ಶೈಕ್ಷಣಿಕ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಮಕ್ಕಳು ಪೊಲೀಸ್ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ ಠಾಣೆಯ ಕಾರ್ಯ ವಿಧಾನಗಳ ಬಗ್ಗೆ ತಿಳಿದುಕೊಂಡರು. ಕಾನೂನು, ಸಂಚಾರ ನಿಯಮ, ಪೊಲೀಸ್ ಠಾಣೆ ಕರ್ತವ್ಯದ ಬಗ್ಗೆ ವಿವರಿಸಲಾಯಿತು. ಮಂಜೇಶ್ವರ ಠಾಣೆ ಪೊಲೀಸರ ಸ್ಪಂದನೆ, ಮಕ್ಕಳೊಂದಿಗೆ ಮಾಡಿದ ಸಮಾಲೋಚನೆ ಪ್ರೇರಣಾದಾಯಕವಾಗಿತ್ತು.

ಠಾಣೆಯಲ್ಲಿ ಏನೆಲ್ಲಾ ನಡೆಯುತ್ತಿದೆ. ದೂರುಗಳನ್ನು ಹೇಗೆ ದಾಖಲಿಸಬಹುದು. ಸಾಮಾಜಿಕ ಕಂಟಕರನ್ನು ಪೊಲೀಸರು ಹೇಗೆ ಪತ್ತೆ ಹಚ್ಚುತ್ತಾರೆ ಎಂಬುದರ ಬಗ್ಗೆ ಮಾಹಿತಿ ನೀಡುವ ಜತೆ ವಿವಿಧ ರೀತಿಯ ಬಂದೂಕು, ಪ್ರತಿಭಟನಾ ನಿರತರ ವಿರುದ್ಧ ಪ್ರಯೋಗಿಸುವ ಅಶ್ರುವಾಯು ಸೇರಿದಂತೆ ಹಲವು ರೀತಿಯ ಸಾಮಾಗ್ರಿ ತೋರಿಸಿ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net