ವಾರಸುದಾರರಿಗೆ ಮೊಬೈಲ್ ಮರಳಿಸಿದ ಪೊಲೀಸರು

IMG20251008115323
-------- ಫೋಟೋ 01 ಮೊಬೈಲ್ ಕಳೆದುಕೊಂಡಿದ್ದ ಶಿವಣ್ಣ ಅವರಿಗೆ ಬೈಲುಕುಪ್ಪೆ ಠಾಣೆ ಪೊಲೀಸರು ಪತ್ತೆ ಹಚ್ಚಿ, ವಾರಸುದಾರರಿಗೆ ಠಾಣೆಯಲ್ಲಿ ಹಸ್ತಾಂತರಿಸಿದರು. ಪಿಎಸ್‌ಐ ರವಿಕುಮಾರ್ ಇದ್ದರು.
Published on

ಬೈಲುಕುಪ್ಪೆ: ಇಲ್ಲಿನ ಬಿ.ಎಂ.ರಸ್ತೆಯಲ್ಲಿ ಇತ್ತೀಚೆಗೆ ಕಳೆದು ಹೋಗಿದ್ದ ಮೊಬೈಲನ್ನು ಬೈಲುಕುಪ್ಪೆ ಪೊಲೀಸರು ಆಂಧ್ರಪ್ರದೇಶದಲ್ಲಿ ಪತ್ತೆ ಹಚ್ಚಿ, ವಾರಸುದಾರರಿಗೆ ಮರಳಿಸಿದ್ದಾರೆ.

ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಗ್ರಾಮದ ಶಿವಣ್ಣ ಅವರ ಮೊಬೈಲ್ ಕೆಲವು ದಿನಗಳ ಹಿಂದೆ ಬೈಲುಕುಪ್ಪೆಯ ಬಿ.ಎಂ.ರಸ್ತೆಯಲ್ಲಿ ಕಾಣೆಯಾಗಿತ್ತು. ತಕ್ಷಣ ಬೈಲುಕುಪ್ಪೆ ಪೊಲೀಸ್ ಠಾಣಾಧಿಕಾರಿ ರವಿಕುಮಾರ್ ಅವರಿಗೆ ದೂರು ನೀಡಿದ್ದರು. ಪೊಲೀಸರು ಮೊಬೈಲನ್ನು ಆಂಧ್ರಪ್ರದೇಶದಲ್ಲಿ ಪತ್ತೆ ಹಚ್ಚಿ, ಅದನ್ನು ವಶಕ್ಕೆ ಪಡೆದು ಶಿವಣ್ಣ ಅವರಿಗೆ ಹಸ್ತಾಂತರಿಸಿದರು. ಠಾಣಾಧಿಕಾರಿ ರವಿಕುಮಾರ್ ಮತ್ತು ಸುರೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net