ಪೊಲೀಸ್​ ಠಾಣೆಯ ಸಮೀಪದಲ್ಲೇ ನೇಣಿಗೆ ಶರಣಾದ ಸಿಬ್ಬಂದಿ

Suicide
Published on

ಉಡುಪಿ: ಪೊಲೀಸ್​ ಠಾಣೆಯ ಸಮೀಪದಲ್ಲೇ ಸಿಬ್ಬಂದಿಯೊಬ್ಬರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಮಾಸೆಬೈಲು ಗ್ರಾಮದಲ್ಲಿ ನಡೆದಿದೆ.

ಕಲಬುರಗಿಯ ನೌರುಗಂಜ್ ನಿವಾಸಿ ಮಲ್ಲಿಕಾರ್ಜುನ್ ಗುಬ್ಬಿ (56) ಮೃತ ದುರ್ದೈವಿ. ಕೆಎಸ್​ಆರ್​ಪಿ (IRB) ಸಿಬ್ಬಂದಿಯಾಗಿದ್ದ ಇವರು ಮೂರು ತಿಂಗಳ‌ ಹಿಂದಷ್ಟೇ ಕೊಪ್ಪಳದ ಮುನಿರಾಬಾದ್​ಗೆ ವರ್ಗಾವಣೆಗೊಂಡಿದ್ದರು. ಆದರೆ, ಮೇ 16ರಂದು ನಕ್ಸಲ್ ಪೀಡಿತ ಅಮಾಸೆಬೈಲು ಠಾಣೆಗೆ ಭದ್ರತೆಗಾಗಿ ನಿಯೋಜಿಸಲಾಗಿತ್ತು.

ಮಲ್ಲಿಕಾರ್ಜುನ್‌ ಅವರು ಶನಿವಾರ ಮುನಿರಾಬಾದ್​ಗೆ ತೆರಳಬೇಕಾಗಿತ್ತು. ಆದರೆ, ಏನಾಯಿತೋ ಇದೀಗ ನೇಣಿಗೆ ಶರಣಾಗಿದ್ದಾರೆ. ಮೃತದೇಹ ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಅನಾರೋಗ್ಯದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net