ಫ್ರೆಂಡ್ಸ್​ ಪಾರ್ಟಿಯಲ್ಲಿ ಬಿಜೆಪಿ ಮುಖ್ಯಸ್ಥನ ಸೊಸೆ ನಿಗೂಢ ಸಾವು

BJP Daughter in Law
Published on

ಹೈದರಾಬಾದ್​: ಆಂಧ್ರ ಪ್ರದೇಶದ ರಾಜ್ಯ ಬಿಜೆಪಿ ಅಧ್ಯಕ್ಷ ಕನ್ನಾ ಲಕ್ಷ್ಮೀ ನಾರಾಯಣ ಅವರ ಸೊಸೆ ಹೈದರಾಬಾದ್​ನ ರಾಯದುರ್ಗಂ ಏರಿಯಾದಲ್ಲಿ ನಿಗೂಢ ರೀತಿಯಲ್ಲಿ ಸಾವಿಗೀಡಾದ್ದಾರೆ.

ಪೊಲೀಸ್​ ಮೂಲಗಳ ಪ್ರಕಾರ ಎನ್​. ಸುಹಾರಿಕಾ ರೆಡ್ಡಿ (32) ಪಾರ್ಟಿಗಾಗಿ ಆಕೆಯ ಫ್ರೆಂಡ್ಸ್​ ಮನೆಗೆ ತೆರಳಿದ್ದಳು ಎಂದು ತಿಳಿದುಬಂದಿದೆ.

ಮಧುಪುರ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬರುವ ಮೀನಾಕ್ಷಿ ಟವರ್ ಅಪಾರ್ಟ್​ಮೆಂಟ್​ನಲ್ಲಿ ನಡೆದ ಪಾರ್ಟಿಯಲ್ಲಿ ಕೆಲವು ಸಮಯಗಳವರೆಗೆ ಡ್ಯಾನ್ಸ್​ ಮಾಡಿದ್ದ ಸುಹಾರಿಕಾ ಇದ್ದಕ್ಕಿದ್ದಂತೆ ಕುಸಿದುಬಿದ್ದು ಸಾವಿಗೀಡಾದರು ಎನ್ನಲಾಗಿದೆ. ಅಂದಹಾಗೆ ಸುಹಾರಿಕಾ ನಾರಾಯಣ ಅವರ ಎರಡನೇ ಮಗ ಫಣೀಂದ್ರ ಅವರ ಪತ್ನಿಯಾಗಿದ್ದರು.

ಕುಸಿದುಬಿದ್ದ ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದಾದರೂ ಅಷ್ಟರಲ್ಲಾಗಲೇ ಆಕೆ ಸಾವಿಗೀಡಾಗಿರುವುದಾಗಿ ವೈದ್ಯರು ದೃಢಪಡಿಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

ಸಾವಿಗೆ ನಿಖರವಾದ ಕಾರಣ ಇನ್ನು ತಿಳಿದುಬಂದಿಲ್ಲ. ಶವಪರೀಕ್ಷೆಯ ನಂತರವಷ್ಟೇ ತಿಳಿದುಬರಲಿದೆ. ಹೃದಯಾಘಾತದಿಂದ ಸಾವಿಗೀಡಾಗಿರುವ ಸಾಧ್ಯತೆ ಇದೆ ಎಂದು ರಾಯ್​ದುರ್ಗಂ ಪೊಲೀಸ್​ ಇನ್ಸ್​ಪೆಕ್ಟರ್​ ಎಸ್​.ರವೀಂದರ್​ ತಿಳಿಸಿದ್ದಾರೆ.

ಪಾರ್ಟಿಯಲ್ಲಿ ಸುಹಾರಿಕಾ ಸುಮಾರು ಒಂದು ಗಂಟೆಗಳವರೆಗೆ ಡ್ಯಾನ್ಸ್​ ಮಾಡಿದ್ದರು. ಆಕೆಯ ಎಂಜಾಯ್​ಮೆಂಟ್​ ನೋಡಿ ಸಂಬಂಧಿಕರೇ ಶಾಕ್​ ಆಗಿದ್ದರಂತೆ. ಗುರುವಾರ ಬೆಳಗ್ಗೆ 11: 30ರ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದಿಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net