More

    ಸಾವರ್ಕರ್ ಹೆಸರಿಟ್ಟ ಸಾರ್ವಜನಿಕರು: ಯಲಹಂಕ ಮೇಲ್ಸೇತುವೆ ಮೇಲೆ ಹೆಸರು ಬರೆದ ಜನ

    ಬೆಂಗಳೂರು: ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್ ಹೆಸರನ್ನು ಯಲಹಂಕ ಮೇಲ್ಸೇತುವೆಗೆ ಇಡುವ ಕುರಿತು ಸರ್ಕಾರ ಹಾಗೂ ಪ್ರತಿಪಕ್ಷಗಳ ನಡುವೆ ಜಟಾಪಟಿ ನಡೆದಿರುವಾಗಲೇ ರಸ್ತೆ ಮೇಲೆ ಸಾರ್ವಜನಿಕರೇ ನಾಮಕರಣ ಮಾಡಿದ್ದಾರೆ.

    ಗುರುವಾರ ಸಿಎಂ ಉದ್ಘಾಟನೆ ಮಾಡಬೇಕಿತ್ತು. ಆದರೆ, ಬುಧವಾರ ದಿನವಿಡೀ ನಡೆದ ಬೆಳವಣಿಗೆ ನಂತರ ಉದ್ಘಾಟನಾ ಕಾರ್ಯಕ್ರಮ ಮುಂದೂಡಲಾಗಿತ್ತು.

    ಆದರೆ, ಮೇಲ್ಸೇತುವೆ ಮೇಲೆ ಸಾವರ್ಕರ್ ಭಾವಚಿತ್ರ ಇರಿಸಿ ನಾಮಕರಣ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಬರೆದು ಕೊಂಡಿದ್ದರು. ಅದರಂತೆಯೇ ಗುರುವಾರ ಬೆಳಗ್ಗೆ ‘ಸ್ವಾತಂತ್ರ್ಯ ವೀರ ಸಾವರ್ಕರ್ ಮೇಲ್ಸೇತುವೆ’ ಎಂದು ರಸ್ತೆಯ ಮೇಲೆ ದೊಡ್ಡದಾಗಿ ಬರೆಯಲಾಗಿತ್ತು.

    ಹೆಸರಿಡುವ ಕುರಿತು ಪ್ರತಿಕ್ರಿಯಿಸಿರುವ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್, ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸ್ವಾತಂತ್ರ್ಯ ವೀರರ ಕುರಿತು ರಾಜಕೀಯ ಮಾಡಬೇಡಿ. ನಿಮ್ಮ ಮನೆಯವರ ಹೆಸರನ್ನು ಬೇರೆಡೆ ಇಡುವಾಗ ಸಹಕಾರ ನೀಡುತ್ತೇವೆ. ಇಷ್ಟರ ನಡುವೆಯೂ ವಿರೋಧಿಸಿದರೆ ಎದುರಿಸಿ, ಮುಂದಿನ ತಿಂಗಳು ನಾಮಕರಣ ಮಾಡಿಯೇ ಸಿದ್ಧ ಎಂದಿದ್ದಾರೆ.

    ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರು ನಾಮಕರಣ ಮಾಡುವ ಕುರಿತು ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಆಹ್ವಾನಿಸಿದೆ. ಅಭಿಪ್ರಾಯ ಸಲ್ಲಿಸಲು ಜೂ. 20ರ ವರೆಗೆ ಕಾಲಾವಕಾಶವಿದೆ. ಅಭಿಪ್ರಾಯದ ಆಧಾರದಲ್ಲಿ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಲಿದೆ.
    | ಎಂ. ಗೌತಮ್ ಕುಮಾರ್ ಮೇಯರ್

    ಪಿಎಸ್‌ಐ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ಸಚಿವ ಸಂಪುಟ ಅಸ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts