ಬೆಟ್ಟಿಂಗ್​ ಕೇಸ್​​ನಲ್ಲಿ ಸಿಕ್ಕಬಿದ್ದ ಪೊಲೀಸ್​ ಮುಖ್ಯ ಪೇದೆ ಜೈಲಿಗೆ...

IPL Betting
Published on

ಚಿಕ್ಕಬಳ್ಳಾಪುರ: ಸದ್ಯ ಐಪಿಎಲ್​ ಹವಾ ಜೋರಾಗಿಯೇ ಇದ್ದು, ಬೆಟ್ಟಿಂಗ್​ ಕೂಡ ಜಾಸ್ತಿಯಾಗಿದೆ. ಇದಕ್ಕೆ ಕಡಿವಾಣ ಹಾಕುವತ್ತ ಪೊಲೀಸ್ ಇಲಾಖೆ ಚುರುಕಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಬೆಟ್ಟಿಂಗ್​ ದಂಧೆಕೋರರನ್ನು ಪತ್ತೆ ಹಚ್ಚಿ, ಅವರನ್ನು ಬಂಧಿಸಬೇಕಾದ ಜವಾಬ್ದಾರಿ ಹೊತ್ತಿದ್ದ ಪೊಲೀಸ್ ಮುಖ್ಯ ಪೇದೆ ಬೆಟ್ಟಿಂಗ್ ಕೇಸ್​ನಲ್ಲಿಯೇ ಸಿಕ್ಕಿಬಿದ್ದಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲಾ ಅಪರಾಧ ವಿಭಾಗದ ಮುಖ್ಯ ಪೇದೆ ಮಂಜುನಾಥ್ (42) ಆರೋಪಿ. ಇದೀಗ ಬೆಟ್ಟಿಂಗ್ ದಂಧೆಯಲ್ಲಿ ಭಾಗಿಯಾದ ಆರೋಪದ ಹಿನ್ನೆಲೆಯಲ್ಲಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಈತನನ್ನು ಕೆಲಸದಿಂದ ಅಮಾನತ್ ಗೊಳಿಸಿದ್ದಾರೆ.

ಐಪಿಎಲ್ ಪಂದ್ಯಾವಳಿಯ ನಡುವೆ ವ್ಯಾಪಕವಾಗಿ ಬೆಟ್ಟಿಂಗ್ ನಡೆಯುತ್ತಿದೆ. ಇದರಲ್ಲಿ ಚಿನ್ನಾಭರಣ, ವಾಹನಗಳು ಸೇರಿ ಹಲವು ವಸ್ತುಗಳ ಜತೆಗೆ ಕೋಟ್ಯಂತರ ರೂಪಾಯಿಯನ್ನು ಪಣಕ್ಕಿಡಲಾಗುತ್ತಿದೆ. ಇದರಿಂದ ಅನೇಕರು ಹಣವನ್ನು ಕಳೆದುಕೊಂಡು ಸಾಲಗಾರರಾಗಿ ನಾನಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದು ಅಪರಾಧ ಚಟುವಟಿಕೆ ಹೆಚ್ಚಳಕ್ಕೆ ಕಾರಣವಾಗಿದೆ. ಇದಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆಯು ಬೆಟ್ಟಿಂಗ್ ದಂಧೆಯನ್ನು ಪತ್ತೆ ಹಚ್ಚಿ, ಹಲವರ ವಿರುದ್ಧ ಪ್ರಕರಣ ದಾಖಲಿಸುತ್ತಿದೆ. ಈಗಾಗಲೇ 15 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net