ಬೆಂಗಳೂರಿನ ನಂದಿನಿ ಲೇ ಔಟ್​ನಲ್ಲಿ ನಸುಕಿನಲ್ಲಿ ಮೊಳಗಿತು ಗುಂಡಿನ ಸದ್ದು..

WhatsApp Image 2020-12-01 at 7.57.02 AM
Published on

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಲಗ್ಗೆರೆ ಕೂಲಿ ಬ್ರಿಜ್​ ಸಮೀಪ ಮಂಗಳವಾರ ನಸುಕಿನಲ್ಲಿ ಶೂಟೌಟ್​ ನಡೆದಿದ್ದು, ದರೋಡೆಕೋರನ ಕಾಲಿಗೆ ಗುಂಡೇಟು ತಗುಲಿದೆ. ಹೆಡ್​ಕಾನ್​ಸ್ಟೆಬಲ್ ಒಬ್ಬರಿಗೂ ಗಾಯವಾಗಿದೆ. ನಂದಿನ ಬಡಾವಣೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದರು.

ಪಿಎಸ್​ಐ ಜೋಗಾನಂದ
ಪಿಎಸ್​ಐ ಜೋಗಾನಂದ

ದರೋಡೆಕೋರನನ್ನು ಅನುಬನ್ ಎಂದು ಗುರುತಿಸಲಾಗಿದೆ. ಈತನ ಸಹಚರ ಅನ್ವರ್​ ಎಂಬಾತನನ್ನು ಪೊಲೀಸರು ನಿನ್ನೆಯೇ ಬಂಧಿಸಿದ್ದರು. ಆತ ನೀಡಿದ ಮಾಹಿತಿ ಆಧರಿಸಿ ಕೂಲಿನಗರದಲ್ಲಿ ತಲೆಮರೆಸಿಕೊಂಡಿದ್ದ ಅನುಬನ್ ಬಂಧನಕ್ಕೆ ಪೊಲೀಸರು ಪಿಎಸ್​ಐ ಜೋಗಾನಂದ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದರು. ಆರೋಪಿ ಅನುಬನ್​ ಪೊಲೀಸರಿಂದ ತಪ್ಪಿಸಿಕೊಳ್ಳಲು ಡ್ಯಾಗರ್ ಬೀಸಿದ್ದು, ಹೆಡ್​ಕಾನ್​ಸ್ಟೆಬಲ್​ ಅಭಿಷೇಕ್ ಅವರಿಗೆ ತಗುಲಿ ಗಾಯಗೊಂಡಿದ್ದಾರೆ. ಕೂಡಲೇ ಆರೋಪಿಯ ಕಾಲಿಗೆ ಪೊಲೀಸರು ಫೈರಿಂಗ್ ಮಾಡಿದ್ದು, ಆತ ಕುಸಿದ ನಂತರ ಬಂಧಿಸಿದ್ದಾರೆ.

ಆರೋಪಿಗಳು ಇತ್ತೀಚೆಗೆ ನಂದಿನಿ ಲೇಔಟ್​ ರಿಂಗ್ ರೋಡ್​ನಲ್ಲಿ ಲಾರಿ ಡ್ರೈವರ್ ಒಬ್ಬರಿಗೆ ಚಾಕುವಿನಿಂದ ಇರಿದು 30,000 ರೂಪಾಯಿ ನಗದು ಮತ್ತು ಮೊಬೈಲ್ ಫೋನ್ ದೋಚಿದ್ದರು. ಈ ಕೇಸ್​ಗೆ ಸಂಬಂಧಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಗಾಯಗೊಂಡ ಆರೋಪಿ ಮತ್ತು ಹೆಡ್​ಕಾನ್​ಸ್ಟೆಬಲ್ ಅವರನ್ನು ಕಣ್ವಶ್ರೀ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಾಳು ಹೆಡ್​ಕಾನ್​ಸ್ಟೆಬಲ್ ಅಭಿಷೇಕ್
ಗಾಯಾಳು ಹೆಡ್​ಕಾನ್​ಸ್ಟೆಬಲ್ ಅಭಿಷೇಕ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net