ಸೈಕಲ್ ಗಿರಿ ಮೇಲೆ ಪೊಲೀಸರ ಫಯರ್

ed653b82-c62d-4a02-a54c-d2f763e1c1f8
Published on

ರಾಮನಗರ: ವಿಚಾರಣೆಗೆ ಕರೆತಂದಿದ್ದ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ರೌಡಿ ಶೀಟರ್ ಸೈಕಲ್ ಗಿರಿ ಮೇಲೆ ಕಗ್ಗಲೀಪುರ ಪಿಎಸ್ಐ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿರುವ ಘಟನೆ ಮಂಗಳವಾರ ನಡೆದಿದೆ.

ಕಳೆದ ಕೆಲವು ದಿನಗಳ ಹಿಂದೆ ಕಗ್ಗಲೀಪುರ ಪೊಲೀಸ್ ಠಾಣೆ ವ್ಯಾಪ್ತಿಯ ಓಬಿ ಚೌಡಹಳ್ಳಿ ಬಳಿಯ ಫಾರಂ ಹೌಸ್ ಒಂದರಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ಬೆದರಿಸಿ ದರೋಡೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿ ಶೀಟರ್ ಸೈಕಲ್ ಗಿರಿಯನ್ನು ಕಗ್ಗಲೀಪುರ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಮಂಗಳವಾರ ಕರೆತಂದಿದ್ದಾರೆ.

ಈ ವೇಳೆ ಪೊಲೀಸರ ಮೇಲೆ ಏಕಾಏಕಿ ಹಲ್ಲೆ ನಡೆಸಿ ಪರಾರಿ ಆಗಲು ಮುಂದಾದಾಗ ಸ್ಥಳದಲ್ಲಿಯೇ ಇದ್ದ ಪಿಎಸ್ಐ ಲೊಕೇಶ್, ಸೈಕಲ್ ಗಿರಿ ಕಾಲಿಗೆ ಗುಂಡು ಹೊಡೆದಿದ್ದಾರೆ.

ಪ್ರಸ್ತುತ ಗಾಯಾಳು ಗಿರಿಯನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಡಿವೈಎಸ್ಪಿ ದಿನಕರ್ ಶೆಟ್ಟಿ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net