ಪೊಲೀಸರಿಗೆ ಕಪಿಗಳ ಕಾಟ; ಸಿಎಂ ನಿರ್ಗಮನ ವೇಳೆ ಫಜೀತಿಗೆ ಸಿಲುಕಿದ ಸಿಬ್ಬಂದಿ!

Monkey
ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ರಾತ್ರಿ ರೆಸಾರ್ಟ್‌ನಿಂದ ಹೊರಡುವ ಹೊತ್ತಿಗೆ ಸರಿಯಾಗಿ ಕಪಿಗಳ ಚೇಷ್ಟೆಯಿಂದ ಖಾಕಿಪಡೆ ಸುಸ್ತಾದ ಪ್ರಸಂಗ ನಡೆದಿದೆ.

ದೇವನಹಳ್ಳಿ ಸಮೀಪದ ರೆಸಾರ್ಟ್‌ನಲ್ಲಿ ಆಯೋಜಿಸಿದ್ದ ಬಿಜೆಪಿ ಚಿಂತನ ಸಭೆ ಮುಗಿದು ಸಿಎಂ ವಾಪಸ್‌ ಹೊರಡಲು ಸಜ್ಜಾಗಿದ್ದರು. ಇದೇ ವೇಳೆ ಪೊಲೀಸರು ತಮ್ಮ ಬೈಕ್‌ಗಳ ಮೇಲಿಟ್ಟಿದ್ದ ಟಿ-ಶರ್ಟ್, ರೇಡಿಯಂ ಜಾಕೆಟ್‌ಗಳನ್ನು ಕೆಲವು ಕೋತಿಗಳು ಎಗರಿಸಿ ಮರವೇರಿ ಕುಳಿತವು. ಮರವೇರಿದ ಒಂದು ಕೋತಿ ಟಿ-ಶರ್ಟ್ ಹಾಕಿಕೊಳ್ಳುವಲ್ಲಿ ಯಶಸ್ವಿಯಾಯಿತು. ಮತ್ತೊಂದು ಮರಿ ಕೋತಿ ರೇಡಿಯಂ ಜಾಕೆಟ್ ಎತ್ತಿಕೊಂಡು ಮರಕ್ಕೆ ಜಿಗಿಯಿತು.

ಮುಖ್ಯಮಂತ್ರಿ ಬರುತ್ತಿರುವ ಮಾಹಿತಿ ತಿಳಿದು ಅತ್ತ ಕರ್ತವ್ಯ ನಿರ್ವಹಿಸಬೇಕೋ? ಕೋತಿಗಳಿಂದ ಟಿ-ಶರ್ಟ್, ರೇಡಿಯಂ ಜಾಕೆಟ್ ವಾಪಸ್ ಕಿತ್ತುಕೊಳ್ಳಬೇಕೋ? ಎಂದು ತಿಳಿಯದ ಫಜೀತಿಗೆ ಪೊಲೀಸರು ಸಿಲುಕಿದರು. ಕೋತಿಗಳ ಬದಲಿಗೆ ಡ್ಯೂಟಿಯತ್ತ ಪೊಲೀಸರು ಗಮನಹರಿಸಿದರು. ಮುಖ್ಯಮಂತ್ರಿಯಿದ್ದ ಕಾರು ಅತ್ತ ಹೋಗುತ್ತಿದ್ದಂತೆ ಇತ್ತ ಕೋತಿಗಳು ಟಿ ಶರ್ಟ್, ರೇಡಿಯಂ ಜಾಕೆಟ್ ಕೆಳಗೆ ಎಸೆದು ಓಟು ಕಿತ್ತವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net