

ಬೆಂಗಳೂರು: ಮೂರು ದಿನಗಳಿಂದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಭಾರಿ ಸುದ್ದಿಯಲ್ಲಿದ್ದಾರೆ. ಮೊನ್ನೆ, ನಿನ್ನೆ ಮಾತ್ರವಲ್ಲದೇ ಇಂದು ಕೂಡ ಅಪ್ಪು ಸೋಷಿಯಲ್ ಮೀಡಿಯಾದಲ್ಲಿ ರಾರಾಜಿಸುತ್ತಿದ್ದು, ಟ್ವಿಟರ್ನಲ್ಲಿ ಮತ್ತೆ ಟ್ರೆಂಡಿಂಗ್ ಆಗಿದ್ದಾರೆ. ಹೀಗೆ ಇಂದು ಅವರು ಮತ್ತೆ ಸುದ್ದಿಯಾಗಲು ಕಾರಣ ಗಂಧದಗುಡಿ.
ಪುನೀತ್ ರಾಜಕುಮಾರ್ ಅಭಿನಯದ ಹಾಗೂ ಅವರು ಒಂದು ಮಹತ್ತರವಾದ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಲಕ್ಕಿಮ್ಯಾನ್ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾದ್ದರಿಂದ ಅವರು ಭಾರಿ ಸುದ್ದಿಯಾಗಿದ್ದು, ಅವರ ಹೆಸರು ಟ್ವಿಟರ್ನಲ್ಲಿ ಟ್ರೆಂಡಿಂಗ್ ಆಗಿತ್ತು. ಇನ್ನು ಪುನೀತ್ ರಾಜಕುಮಾರ್ ಅವರ ಟ್ವಿಟರ್ ಹ್ಯಾಂಡಲ್ನಲ್ಲಿನ ವೆರಿಫೈಡ್ ಗುರುತು ಬ್ಲೂ ಟಿಕ್ ಮಾಯವಾದ್ದರಿಂದ ಅದಕ್ಕೆ ಅವರ ಅಭಿಮಾನಿಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದರಿಂದ ನಿನ್ನೆಯೂ ಭಾರಿ ಸುದ್ದಿಯಾಗಿದ್ದರು.
ಇಂದು ಗಂಧದಗುಡಿಯ ಕಾರಣಕ್ಕೆ ಪುನೀತ್ ರಾಜಕುಮಾರ್ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ರಾರಾಜಿಸುತ್ತಿದ್ದಾರೆ. ಅವರ ಮಹತ್ವಾಕಾಂಕ್ಷೆಯ 'ಗಂಧದಗುಡಿ' ಸಾಕ್ಷ್ಯಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾದ ಹಿನ್ನೆಲೆಯಲ್ಲಿ ಅಭಿಮಾನಿಗಳು ಸಂಭ್ರಮವನ್ನು ಹಂಚಿಕೊಳ್ಳಲಾರಂಭಿಸಿದ್ದಾರೆ.
ಕರ್ನಾಟಕದ ಪ್ರಕೃತಿ ಸೊಬಗನ್ನು ವಿಭಿನ್ನವಾಗಿ ತೋರಿಸಬೇಕು ಎಂಬ ನಿಟ್ಟಿನಲ್ಲಿ ವನ್ಯಜೀವಿ ಛಾಯಾಗ್ರಾಹಕ ಅಮೋಘವರ್ಷ ಅವರೊಂದಿಗೆ ಸೇರಿ ಪುನೀತ್ ರಾಜಕುಮಾರ್ ಹೊರತಂದಿರುವ ಸಾಕ್ಷ್ಯಚಿತ್ರವೇ ಗಂಧದಗುಡಿ. ಇದರ ಟೀಸರ್ ಡಿಸೆಂಬರ್ನಲ್ಲಿ ಬಿಡುಗಡೆ ಆಗಿತ್ತು. ಈ ಸಾಕ್ಷ್ಯಚಿತ್ರ ಅ.28ರಂದು ಬಿಡುಗಡೆ ಆಗಲಿರುವ ಕುರಿತು ಪಿಆರ್ಕೆ ಪ್ರೊಡಕ್ಷನ್ಸ್ ದಿನಾಂಕ ಪ್ರಕಟಿಸಿದೆ.