ಗೃಹಲಕ್ಷ್ಮಿಗೆ ಪೊಲೀಸ್ ಬಂದೋಬಸ್ತ್

Gruhalakshmi
Published on

ಹುಬ್ಬಳ್ಳಿ: ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಬಂದಿದ್ದ ಕೆಲವರು ನಗರದ ವೀರಾಪೂರ ಓಣಿಯ ಕರ್ನಾಟಕ ಒನ್ ಕೇಂದ್ರದ ಮುಂದೆ ತಗಾದೆ ತೆಗೆದ ಘಟನೆ ಭಾನುವಾರ ಜರುಗಿದೆ.


ಬೆಳಗ್ಗೆ 4ಗಂಟೆಗೆ ಬಂದಿದ್ದ ಅರ್ಜಿದಾರರು ಸರತಿಯಲ್ಲಿ ನಿಂತಿದ್ದರೂ ಕೇಂದ್ರವನ್ನು ಏಕೆ ಬಂದ್ ಮಾಡಿದ್ದೀರಿ? ಇದಕ್ಕೆ ನೀವೇ ಕಾರಣವೆಂದು ಆರೋಪಿಸಿ ಕೆಲವರು, ಮಹಿಳಾ ಸಿಬ್ಬಂದಿ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾರೆ.


ಸ್ಥಳಕ್ಕೆ ಆಗಮಿಸಿದ ಬೆಂಡಿಗೇರಿ ಠಾಣೆ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದು, ಕೇಂದ್ರಕ್ಕೆ ಬೀಗ ಹಾಕಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net